ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

1 ಸಾವಿರ ಎಕರೆ ಅರಣ್ಯ ಪ್ರದೇಶ ದತ್ತು ಪಡೆದ ನಾಗಾರ್ಜುನ

ಸಾಕಷ್ಟು ಸಮಾಜಿಕ ಕೆಲಸಗಳಿಂದ ಜನಮನ ಗೆದ್ದ ನಟ ನಾಗಾರ್ಜುನ ಇದೀಗ ಅವರು 1 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದಿದ್ದಾರೆ.

ಪರಿಸರ ಉಳಿಸಿ ಎಂದು ಹೇಳುವವರ ಮಧ್ಯೆ ಇವರ ಕಾರ್ಯ ಇತರರಿಗೆ ಮಾದರಿಯಾಗಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣವಾಗಿದ್ದು ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್ ಜೋಗಿನಪಲ್ಲಿ. ಗಿಡ ಬೆಳಸಿ ಕಾಡು ಉಳಿಸಿ ಎನ್ನುತ್ತ ಗ್ರೀನ್ ಇಂಡಿಯಾ ಚಾಲೆಂಜ್ ಆಯೋಜಿಸಿ ಖ್ಯಾತಿ ಪಡೆದಿರುವ ಸಂತೋಷ್, ಈಚೆಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆ ವೇಳೆ ನಾಗಾರ್ಜುನ ಅವರು ಒಂದು ಸಾವಿರ ಎಕರೆ ಅರಣ್ಯವನ್ನು ದತ್ತು ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.

ಈಗಾಗಲೇ ಪ್ರಭಾಸ್ 1650 ಎಕರೆ ಅರಣ್ಯ ದತ್ತು ಪಡೆದು ಆ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಾಗೆಯೇ ಉದ್ಯಮಿ ಪಾರ್ಥಸಾರಥಿ ರೆಡ್ಡಿ ಅವರು ಸುಮಾರು 2500 ಎಕರೆ ಅರಣ್ಯ ಪ್ರದೇಶವನ್ನು ದತ್ತು ಪಡೆದು, ಅದರ ಕಾಳಜಿವಹಿಸಿದ್ದಾರೆ. ಈ ವಿಚಾರ ತಿಳಿದ ನಾಗಾರ್ಜುನ, 'ನಾನು ಕೂಡ 1 ಸಾವಿರ ಎಕೆರೆ ಅರಣ್ಯವನ್ನು ದತ್ತು ಪಡೆಯಲಿದ್ದೇನೆ' ಎಂದು ಘೋಷಿಸಿದರು. ಅಲ್ಲದೆ, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಡುವಂತೆ ಎಂಪಿ ಸಂತೋಷ್ ಕುಮಾರ್ ಅವರಲ್ಲಿ ನಾಗಾರ್ಜುನ ಮನವಿ ಮಾಡಿಕೊಂಡರು.

ಇದೇ ವೇಳೆ ನಟ-ನಟಿಯರಿಗೆ, ಚಿತ್ರರಂಗದ ಗಣ್ಯರಿಗೆ ಗಿಡ ನೆಡುವಂತೆ ಚಾಲೆಂಜ್ ನೀಡಿದ್ದಾರೆ. ನಾಗರೀಕರು ಕೂಡ ಈ ಚಾಲೆಂಜ್ ನಲ್ಲಿ ಭಾಗಿಯಾಗಿ ಗಿಡ ನೆಟ್ಟಿದ್ದಾರೆ. ಈವರೆಗೂ ಗ್ರೀನ್ ಇಂಡಿಯಾ ಚಾಲೆಂಜ್ ಮೂಲಕ 16 ಕೋಟಿ ಗಿಡಗಳನ್ನು ನೆಡಲಾಗಿದೆ.

Edited By : Nirmala Aralikatti
PublicNext

PublicNext

13/12/2021 01:57 pm

Cinque Terre

30.27 K

Cinque Terre

2