ವಾಷಿಂಗ್ಟನ್: ಗಾಡ್ ಫೆಲ್ಲಾಸ್ ಸೇರಿದಂತೆ ಸುಮಾರು ಜನಪ್ರಿಉಯ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಹೊಂದಿದ್ದ ಹಾಲಿವುಡ್ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ.
ರೇ ಲಿಯೊಟ್ಟಾ ಅವರಿಗೆ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹಾಲಿವುಡ್ ಸಿನಿಮಾ ಸೇರಿದಂತೆ ಅಮೆರಿಕಾದ ಟಿವಿ ವಾಹಿನಿಗಳ ಸೀರಿಸ್ ಗಳಲ್ಲೂ ಅವರು ನಟಿಸಿದ್ದಾರೆ. ಅಲ್ಲದೇ, ಆಪಲ್ ಟಿವಿ, ಸಿರೀಸ್ ಬ್ಲಾಕ್ ಬರ್ಡನ್ ಟರೋನ್ ಎಗೆರ್ಟನ್‌ನಲ್ಲೂಇವರು ನಟಿಸಿದ್ದರು. ತಮ್ಮ 67ರ ಪ್ರಾಯದಲ್ಲೂ ಜಸಿ ನಿಟೊಲೊ ಅವರೊಂದಿಗೆ ಎಂಗೇಜ್ ಆಗಿದ್ದ ಅವರು ಮದುವೆಗಾಗಿ ತಯಾರಿಯನ್ನೂ ನಡೆಸಿದ್ದರು ಎಂದು ಅಮೆರಿಕದ ಸುದ್ದಿ ಸಂಸ್ಥೆಗಳಯ ವರದಿ ಮಾಡಿವೆ.
PublicNext
27/05/2022 03:48 pm