ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಕೋಲಾಹಲ ಎಬ್ಬಿಸಿದ್ದ ಖ್ಯಾತ ಪಾಪ್ ಗಾಯಕಿ ರಿಹಾನಾ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ.
ಹೌದು. ಗಣೇಶನ ವಿಗ್ರಹದ ಪೆಂಡೆಂಟ್ ಧರಿಸಿದ ರಿಹಾನ ಅರೆಬೆತ್ತಲಾಗಿ ಪೋಸ್ ನೀಡಿದ್ದಾರೆ. ಹಿಂದೂ ದೇವರ ಪೆಂಡೆಂಟ್ ಧರಿಸಿ ಅಸಭ್ಯತನ ತೋರಿದ್ದಾರೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪವಿತ್ರ ದೇವರ ಹಾಗೂ ನಮ್ಮ ನಂಬಿಕೆಗೆ ಅವಮಾನ ಮಾಡಿದ್ದಾರೆ ಎಂದು ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳ ಉಡುಪು ಜಾಹೀರಾತಿಗಾಗಿ ರಿಹಾನ ಈ ರೀತಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಇಂದು ರಾತ್ರಿ ಒಳ ಉಡುಪು ಧರಿಸಬೇಡಿ ಎಂದು ಸಂದೇಶ ರವಾನಿಸಿದ್ದಾರೆ. ಟಾಪ್ ಲೆಸ್, ಫುಲ್ ಲೆಸ್ ಆದರೂ ನಮ್ಮ ತಕರಾರಿಲ್ಲ. ಆದರೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದೀರಾ ಎಂದು ಆರೋಪಿಸಿ ನೆಟ್ಟಿಗರು ಕಮೆಂಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
PublicNext
16/02/2021 07:12 pm