'ಕಾಂತಾರ' ಸಿನಿಮಾ ಸದ್ಯ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಬಿಡುಗಡೆಯಾದ ಎಲ್ಲ ಥಿಯೇಟರ್‌ಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಹಲವು ಆಯಾಮಗಳಲ್ಲಿ ಸುದ್ದಿ ಆಗುತ್ತಲೇ ಇದೆ.
ಈಗ ಇದರಲೇ ಹೊಸ ವಿಷಯ ಅಂದ್ರೆ ಪ್ರೇಕ್ಷಕನಿಗೂ ಪರಕಾಯ ಪ್ರವೇಶವಾಗಿದ್ದು. ಚಿತ್ರಮಂದಿರದಲ್ಲಿ ಚಿತ್ರ ನೋಡುವಾಗ ಕ್ಲೈಮ್ಯಾಕ್ಸ್ ದೃಶ್ಯ ನೋಡಿ ಪ್ರೇಕ್ಷಕನೊಬ್ಬ ತೆರೆ ಮೇಲಿನ ಸನ್ನಿವೇಶದಂತೆಯೇ ವರ್ತಿಸಿದ್ದಾನೆ. ಅದರಂತೆಯೇ ಕೂಗಿದ್ದಾನೆ.
ಸದ್ಯ ವಿಡಿಯೋ ವೈರಲ್ ಆಗಿದ್ದು ನೋಡಿದ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ದೈವಕ್ಕೆ ಮಾಡಿದ ಅವಮಾನ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನೂ ಕೆಲವರು ಇದು ರಿಷಭ್ ಶೆಟ್ಟಿ ಅವರ ಪ್ರಬುದ್ಧ ನಟನೆಯ ಪರಿಣಾಮ ಎಂದು ಕಾಮೆಂಟ್ ಮಾಡ್ತಿದ್ದಾರೆ.
PublicNext
12/10/2022 04:11 pm