ಮೈಸೂರು: ಮೈಸೂರಿನ ಸೆಲೆಬ್ರಿಟಿ ಮ್ಯೂಸಿಯಂನಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಮೇಣದ ಪ್ರತಿಮೆ ಇರಿಸಲಾಗಿದೆ. ಅಪ್ಪು ಜನ್ಮ ದಿನದ ಅಂಗವಾಗಿ ನಿನ್ನೆ ಶುಕ್ರವಾರ ಪ್ರತಿಮೆ ಅನಾವರಣಗೊಳಿಸಲಾಗಿದೆ.
ಸುಮಾರು 10 ಜನ ಕಲಾವಿದರು ಮೇಣದಿಂದ ಈ ಪ್ರತಿಮೆಯನ್ನು ಮೂರು ತಿಂಗಳುಗಳ ಕಾಲ ತಯಾರಿಸಿದ್ದಾರೆ. ಒಟ್ಟು ಹತ್ತು ಲಕ್ಷ ವೆಚ್ಚದಲ್ಲಿ ತಯಾರಾಗಿರುವ ಪ್ರತಿಮೆ ನೋಡಲು ಅಪ್ಪು ಅಭಿಮಾನಿಗಳು ಮ್ಯೂಸಿಯಂನತ್ತ ಆಗಮಿಸುತ್ತಿದ್ದಾರೆ
PublicNext
19/03/2022 03:32 pm