ಮುಂಬೈ: ಭಾರತ ರತ್ನ ಲತಾ ಮಂಗೇಶ್ಕರ್ ಅವರ ಅಂತಿಮ ಸಂಸ್ಕಾರದ ಸಂದರ್ಭದಲ್ಲಿನ ಒಂದು ಫೋಟೋ ವೈರಲ್ ಆಗಿತ್ತು. ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಇರುವ ಈ ಫೋಟೋ ಹಾಗೂ ವಿಡಿಯೋ ನೆಟ್ಟಿಗರ ಮನಸು ಗೆದ್ದಿದೆ. ನಟ ಶಾರೂಖ್ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಮುಂದೆ ಪ್ರಾರ್ಥನೆ ಸಲ್ಲಿಸುತ್ತಿದ್ದರೆ ಪೂಜಾ ಅವರು ಕೈ ಜೋಡಿಸಿ ನಮಸ್ಕರಿಸಿದ್ದಾರೆ. ಈ ದೃಶ್ಯವನ್ನು ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಆದರೆ ಬಹುತೇಕರು ಇದು ನನ್ನ ಜಾತ್ಯತೀತ ಭಾರತ ಎಂದು ಬಣ್ಣಿಸುತ್ತಿದ್ದಾರೆ.
PublicNext
07/02/2022 09:30 pm