ನವದೆಹಲಿ: ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡು ಕೃತಕ ಕಾಲುನಿಂದ ನೃತ್ಯ ಮಾಡಿ ದಾಖಲೆ ನಿರ್ಮಿಸಿದ ನಟಿ ಹಾಗೂ ನೃತ್ಯಕಲಾವಿದೆ ಸುಧಾ ಚಂದ್ರನ್ ಅವರಿಗೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್ಎಫ್) ಕ್ಷಮೆ ಕೋರಿದೆ.
ಹೌದು ಪ್ರತಿ ಬಾರಿ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಅಧಿಕಾರಿಗಳು ತಮ್ಮ ಕೃತಕ ಕಾಲನ್ನು ಬಿಚ್ಚಿ ತೋರಿಸಲು ಕೇಳುತ್ತಾರೆ. ಇದರಿಂದ ಹಿಂಸೆ ಮತ್ತು ನೋವುಂಟಾಗುತ್ತಿದೆ ಎಂದು ಸುಧಾ ಗುರುವಾರ ಸಂಜೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದರು.
“ನನ್ನ ಕಾಲಿನ ಮೇಲೆ ಇಟಿಡಿ ಪರೀಕ್ಷೆ(ಸ್ಫೋಟಕ ವಸ್ತು ಪತ್ತೆ ಮಾಡುವ ಪರೀಕ್ಷೆ) ಮಾಡಿ ಎಂದು ಎಷ್ಟು ಮನವಿ ಮಾಡಿದರೂ ಸಿಐಎಸ್ ಎಫ್ ಅಧಿಕಾರಿಗಳು ಕೇಳುವುದಿಲ್ಲ. ಪ್ರಧಾನಿ ಮೋದಿಯವರೇ, ದೇಶದಲ್ಲಿ ಏನು ನಡೆಯುತ್ತಿದೆ ನೋಡಿ. ಇದು ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ನಡೆಸಿಕೊಳ್ಳುವ ರೀತಿಯೇ?” ಎಂದು ಭಾವುಕವಾಗಿ ಪ್ರಶ್ನಿಸಿದ್ದರು.
ಸುಧಾರ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಸ್ಪಷ್ಟನೆ ನೀಡಿರುವ ಸಿಐಎಸ್ ಎಫ್, ಶ್ರೀಮತಿ ಸುಧಾ ಚಂದ್ರನ್ ಅವರಿಗಾದ ಅನಾನುಕೂಲಕ್ಕೆ ‘ಕ್ಷಮೆ’ ಹೇಳಿದೆ.
PublicNext
22/10/2021 08:36 pm