ಜೈಪುರ: ದೇಶಾದ್ಯಂತ ಪೆಟ್ರೋಲ್ ಡೀಸೆಲ್ ದರ ದಿನದಿಂದ ದಿನಕ್ಕೆ ಕಾಣುತ್ತಿದೆ. ಅದರಲ್ಲೂ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಇದೇ ವಿಚಾರವಾಗಿ ವ್ಯಂಗ್ಯವಾಡಿದ ಕಾಮಿಡಿಯನ್ ವಿರುದ್ಧ ಬಂಕ್ ಮಾಲೀಕರು ದೂರು ನೀಡಿದ್ದಾರೆ.
ಕಾಮಿಡಿಯನ್ ಶ್ಯಾಂ ರಂಗೀಲ ಅವರು ಪೆಟ್ರೋಲ್ ಬಂಕ್‌ನಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ರೀತಿ ಮಾತನಾಡಿದ್ದರು. "ನನ್ನ ಸೇಹ್ನಿತರೇ ಇದು ರಾಜಸ್ಥಾನಕ್ಕೆ ಗೌರವ ತರುವ ವಿಚಾರ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರೂ. ಆಗಿದೆ. ಹಿಂದಿನ ಯಾವುದೇ ಸರ್ಕಾರ ಪೆಟ್ರೋಲ್‌ಗೆ ಇಂತಹ ಮೌಲ್ಯವನ್ನು ಕೊಟ್ಟಿರಲಿಲ್ಲ" ಎಂದು ವ್ಯಂಗ್ಯವಾಡಿದ್ದರು.
ಶ್ಯಾಂ ರಂಗೀಲ ಅವರು ಫೆಬ್ರವರಿ 16ರಂದು ತಾನೊಬ್ಬ ಪತ್ರಕರ್ತ ಎಂದು ಹೇಳಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ ಶ್ಯಾಂ ರಂಗೀಲ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ದೂರು ನೀಡುವಂತೆ ಇಂಧನ ಸರಬರಾಜು ಮಾಡುವ ಕಂಪನಿ ಸೂಚನೆ ನೀಡಿತ್ತು. ಇಲ್ಲವಾದಲ್ಲಿ ಪೆಟ್ರೋಲ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಬಂಕ್ ಮಾಲೀಕ ಸುರೇಂದ್ರ ಅಗರ್‌ವಾಲ್ ಅವರಿಗೆ ಹೇಳಿತ್ತು. ಹೀಗಾಗಿ ಸುರೇಂದ್ರ ಅವರು ಶ್ಯಾಂ ರಂಗೀಲ ವಿರುದ್ಧ ದೂರು ದಾಖಲಿಸಿದ್ದಾರೆ.
PublicNext
21/02/2021 05:20 pm