ನವದೆಹಲಿ: ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮಗನ ಹೆಸರನ್ನು ಪ್ರಸ್ತುತ ವ್ಯವಹಾರಗಳ ಪ್ರಶ್ನೆಯಾಗಿ ಕೇಳಿರುವುದು ಈಗ ವೈರಲ್ ಆಗಿದೆ. ಹೌದು ಮಧ್ಯಪ್ರದೇಶದ ಖಾಸಗಿ ಶಾಲೆಯ 6ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಈ ಎಡವಟ್ಟು ಮಾಡಿದೆ.
'ಪ್ರಚಲಿತ ವಿದ್ಯಮಾನಗಳು' ಪ್ರಶ್ನೆ ಪತ್ರಿಕೆಯಲ್ಲಿ 'ಕರೀನಾ ಕಪೂರ್-ಸೈಫ್ ಅಲಿ ಖಾನ್ ಮಗನ ಪೂರ್ಣ ಹೆಸರೇನು?' ಎಂದು ಕೇಳಲಾಗಿದೆ. ಸದ್ಯ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರ ಸಂಸ್ಥೆ ರಾಜ್ಯ ಶಿಕ್ಷಣ ಇಲಾಖೆಗೆ ಸೂಚಿಸಿದೆ.
ಖಾಂಡ್ವಾ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಸಂಜೀವ್ ಭಲೇರಾವ್ ಅವರು ಈ ವಿಷಯವನ್ನು ಗಮನಕ್ಕೆ ತಂದಿದ್ದಾರೆ ಮತ್ತು ಶಾಲೆಗೆ ಶೋಕಾಸ್ ನೋಟಿಸ್ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಈ ಪ್ರಶ್ನೆ ಪತ್ರಿಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
PublicNext
25/12/2021 07:58 pm