ಬೆಂಗಳೂರು: ಮಾಲ್‌ನಿಂದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಣ್ಣ ಬಯಲಾಯಿತು ಎಂದು ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಸ್ಯಾಂಡಲ್‍ವುಡ್ ನಂತೆ ಬಾಲಿವುಡ್‌ನಲ್ಲಿಯೂ ಡ್ರಗ್ಸ್ ಘಾಟು ಎದ್ದಿದ್ದು, ಸ್ಟಾರ್ ನಟಿಯರಾದ ದೀಪಿಕಾ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ಸಾರಾ ಅಲಿಖಾನ್ ಗೆ ಎನ್‍ಸಿಬಿ ಸಮನ್ಸ್ ನೀಡಿದೆ. ಇಂದು ದೀಪಿಕಾ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಿಮಗೆಲ್ಲರಿಗೂ ಗೊತ್ತಿರುವಂತೆ, ಖಿನ್ನತೆ ಎನ್ನುವ ಕಥೆ ಕಟ್ಟಿ ಅದರ ಮೂಲಕ ಸಾಮಾಜಿಕ ಕಳಕಳಿಯ ಪ್ರಚಾರ ಪಡೆದ ದೀಪಿಕಾ, ಇದೀಗ ಆ ಮಾಲ್ ಎಂಬ ಹೊಗೆ ಅವರನ್ನೇ ಆವರಿಸಿದೆ. ಅವಳನ್ನೇ ರೋಲ್ ಮಾಡೆಲ್ ಎಂದು ಹಿಂಬಾಲಿಸುತ್ತಿರುವವರಿಗೆ ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಬರೆದುಕೊಂಡಿದ್ದಾರೆ.
PublicNext
25/09/2020 03:42 pm