ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋಸ, ಡ್ರಗ್‌, ಅಂಡರ್‌ವರ್ಲ್ಡ್‌ ಸಂಪರ್ಕ: ಬಾಲಿವುಡ್‌ನ ಡರ್ಟಿ ಸಿಕ್ರೇಟ್‌ಗಳು

ಬಾಲಿವುಡ್ ಸೆಲೆಬ್ರಿಟಿಗಳ ಗ್ಲಾಮರ್ ಮತ್ತು ಕ್ಲಾಸಿ ಲೈಫ್‌ ಸ್ಟೈಲ್‌ಗೆ ಫ್ಯಾನ್ಸ್‌ ಮರುಳಾಗುವುದು ಕಾಮನ್‌. ತಮ್ಮ ನೆಚ್ಚಿನ ಸ್ಟಾರ್‌ಗಳಂತೆ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ ಕೂಡ ಹಾಗೂ ಅವರಲ್ಲಿ ಕೆಲವರು ತಮ್ಮ ಫೆವರೇಟ್‌ ನಟರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ. ಆದರೆ ಈ ಬಣ್ಣದ ಲೋಕದ ಇನ್ನೊಂದು ಮುಖ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿದೆ ನೋಡಿ ಬಾಲಿವುಡ್‌ನ ಕೊಳಕು ರಹಸ್ಯಗಳು.

ಬಾಲಿವುಡ್‌ನಲ್ಲಿ ಪ್ರತಿಭಾವಂತ ನಟರಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಕತ್ರಿನಾ ಕೈಫ್ ಮತ್ತು ಇನ್ನೂ ಅನೇಕರು ಎ-ಲಿಸ್ಟ್ ನಟರು ಮತ್ತು ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರಗಳನ್ನು ನೀಡಿದ್ದಾರೆ. ಆದರೆ ಈ ನಟರು ಕೆಲವು ಅಶ್ಲೀಲ ದೃಶ್ಯಗಳನ್ನು ಹೊಂದಿರುವ ಬಿ-ಗ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಕತ್ರಿನಾ ಕೈಫ್ ಅವರು ಬೂಮ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರೆ, ಶಾರುಖ್ ಖಾನ್ ಮಾಯಾ ಮೆಮ್ಸಾಬ್ ಮತ್ತು ಅಕ್ಷಯ್ ಕುಮಾರ್ ಮಿಸ್ಟರ್ ಬಾಂಡ್‌ನಲ್ಲಿ.

ಬಿ-ಟೌನ್ ನಟರು ಪರದೆಯ ಮೇಲೆ ಪರ್ಫೇಕ್ಟ್‌ ಲವರ್‌ ಪಾತ್ರಗಳನ್ನು ಪ್ರತಿನಿಧಿಸುತ್ತಾರೆ, ಆದರೆ ಅವರ ನಿಜ ಜೀವನವು ರೀಲ್ ಜೀವನಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ. ರಾಜ್ ಕಪೂರ್, ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ದಿಲೀಪ್ ಕುಮಾರ್ ಅವರಂತಹ ಹಲವಾರು ನಟರು ತಮ್ಮ ಪಾರ್ಟನರ್‌ಗೆ ಮೋಸ ಮಾಡಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್‌ನಲ್ಲಿ ಯಶಸ್ವಿಯಾಗಲು ಒಬ್ಬರು ಸುಂದರವಾಗಿರಬೇಕು ಮತ್ತು ನಟನಾ ಕೌಶಲ್ಯ ಹೊಂದಿರಬೇಕು ಎಂದು ಹಲವರು ನಂಬುತ್ತಾರೆ. ಆದರೆ ವಾಸ್ತವದಲ್ಲಿ, ವರ್ಣಭೇದ ನೀತಿ, ಪ್ರಾದೇಶಿಕತೆ ಮತ್ತು ತಾರತಮ್ಯವು ಉದ್ಯಮದಲ್ಲಿ ಮೇಲುಗೈ ಸಾಧಿಸುತ್ತದೆ. ಸ್ಮಿತಾ ಪಾಟೀಲಿನಿಂದ ಹಿಡಿದು ಬಿಪಾಶಾ ಬಸು ಮತ್ತು ಮನೋಜ್ ಬಾಜಪೇಯಿ, ಧನುಷ್ ವರೆಗೆ ಅನೇಕ ಟ್ಯಾಲೆಂಟ್ಡ್‌ ಸ್ಟಾರ್‌ಗಳು ಈ ರೀತಿಯ ಸಮಸ್ಯೆಗಳನ್ನು ಎದುರಿಸಿದರು.

ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ವರ್ಜಿನಿಟಿ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ . ರಣವೀರ್ ಸಿಂಗ್ ತನ್ನ 12 ನೇ ವಯಸ್ಸಿನಲ್ಲಿ ಹಾಗೂ ರಣಬೀರ್ ಕಪೂರ್ ತನ್ನ 15 ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡರು. ಇದಕ್ಕೆ ವ್ಯತಿರಿಕ್ತವಾಗಿ ಸಲ್ಮಾನ್ ಖಾನ್ ಅವರಂತಹ ಸ್ಟಾರ್‌ ನಾನು ಇನ್ನೂ ವರ್ಜಿನ್‌ ಎಂದು ಹೇಳಿಕೊಂಡಿರುವುದು ತಮಾಷೆಯ ವಿಷಯವಾಗಿದೆ.

ಬಾಲಿವುಡ್‌ಗೆ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ ಎನ್ನುವುದು ತಿಳಿದಿರುವ ವಿಷಯ. ಹಲವಾರು ನಟರು ಕಾಸ್ಟಿಂಗ್ ಕೌಚಿಂಗ್‌ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜನಪ್ರಿಯ ನಟರಾದ ರಣವೀರ್ ಸಿಂಗ್, ಆಯುಷ್ಮಾನ್ ಖುರಾನಾ,ಕಂಗನಾ ರಣಾವತ್, ರಾಧಿಕಾ ಆಪ್ಟೆ, ಟಿಸ್ಕಾ ಚೋಪ್ರಾ ಮತ್ತು ಕಲ್ಕಿ ಕೋಚ್ಲಿನ್ ಈ ಬಗ್ಗೆ ರಿವೀಲ್‌ ಮಾಡಿದ್ದಾರೆ.

ಸಂಜಯ್ ದತ್, ಫರ್ದೀನ್ ಖಾನ್ ಮತ್ತು ರಣಬೀರ್ ಕಪೂರ್ ಅವರಂತಹ ನಟರು ಮಾದಕ ವ್ಯಸನಕ್ಕೆ ಹೆಸರುವಾಸಿ. ನಟ ಧರ್ಮೇಂದ್ರರ ಮದ್ಯ ವ್ಯಸನವು ಅವರ ವೃತ್ತಿಜೀವನದ ಅವನತಿಗೆ ಕಾರಣವಾಯಿತು ಎಂದು ಒಪ್ಪಿಕೊಂಡರು.

ಬಾಲಿವುಡ್ ಸೆಲೆಬ್ರಿಟಿಗಳು ಹೊರಗಿನಿಂದ ಖುಷಿಯಾಗಿ ಕಂಡರೂ ಅವರ ಜೀವನದಲ್ಲಿನ ಆಗುಹೋಗುಗಳು ನಮ್ಮ ಕಲ್ಪನೆಗೂ ಮೀರಿದ್ದಾಗಿದೆ.. ಯಶಸ್ವಿ ನಟರಾದ ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಖ್ಯಾತ ನಟಿಯರಾದ ಮಮತಾ ಕುಲಕರ್ಣಿ, ಮೋನಿಕಾ ಬೇಡಿ ಮತ್ತು ಮಂದಾಕಿನಿ ಭೂಗತ ಡಾನ್‌ ಜೊತೆ ಡೇಟ್‌ ಮಾಡಿದ್ದಾರೆ ಹಾಗೂ ಅನೇಕ ಬಾರಿ ಒಟ್ಟಿಗೆ ಕಂಡುಬಂದಿದ್ದಾರೆ. ಆದಾಗ್ಯೂ, ನಟ ಸಂಜಯ್ ದತ್ ಭೂಗತ ಜಗತ್ತಿನೊಂದಿಗಿನ ಸಂಪರ್ಕ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದರು.

ಬಾಲಿವುಡ್‌ನಲ್ಲಿ ವಿವಾಹೇತರ ಸಂಬಂಧಗಳನ್ನು ದೊಡ್ಡ ವಿಷಯವಲ್ಲ. ನಟ ಗೋವಿಂದ ರಾಣಿ ಮುಖರ್ಜಿ ಜೊತೆ, ಹಾಗೂ ವಿವಾಹಿತ ಧರ್ಮೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾಗುವ ಮೊದಲೇ ಸಂಬಂಧ ಹೊಂದಿದ್ದರು. ಹಾಗೇ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಜೊತೆ ಹಲವಾರೂ ಸ್ಟಾರ್‌ಗಳು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ.

Edited By :
PublicNext

PublicNext

22/09/2020 06:23 pm

Cinque Terre

63.46 K

Cinque Terre

1