ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಟಗರು' ಬೆಡಗಿ ಅನಿತಾ ಭಟ್‌ಗೆ ಕೈತುಂಬ ಆಫರ್..!

ಟಗರು ಚಿತ್ರದ ವಿಭಿನ್ನ‌ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್‌ ಮಾಡಿರುವ ಮಲೆನಾಡಿನ ಬೆಡಗಿ ಅನಿತಾ ಭಟ್ ಅವರು ಸಾಲು -ಸಾಲು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕೊರೊನಾ ಆತಂಕವು ಎಲ್ಲದಕ್ಕೂ ಅಡ್ಡಿ ಉಂಟು ಮಾಡಿದೆ.

35 ವರ್ಷದ ಅನಿತಾ ಭಟ್ ಅವರು ಬೆಂಗಳೂರು-69 ಚಿತ್ರದ ಶೂಟಿಂಗ್ ಬಹುತೇಕ ಮುಗಿಸಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರೊಂದಿಗೆ ಸದ್ಗುಣ ಸಂಪನ್ನ ಮಾಧವ 100% ಹಾಗೂ ಕಲಿವೀರ, ಕನ್ನೇರಿ ಚಿತ್ರದಲ್ಲೂ ನಟಿಸಲು ಒಪ್ಪಿದ್ದಾರೆ.

2008ರಲ್ಲಿ 'ಸೈಕೋ' ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಅನಿತಾ ಭಟ್‌ ದಾಸವಾಳ, ಸಿಲ್ಕ್‌, ಸುಗ್ರೀವ, ಪರಪಂಚ, ರಾಜ್ ಬಹದ್ದೂರ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

2018ರಲ್ಲಿ ಡೇಸ್ ಆಪ್ ಬೋರಾಪುರ್ ಹಾಗೂ ಟಗರು ಸಿನಿಮಾದ ಮೂಲಕ ಮತ್ತೆ ನಟನೆಗೆ ಮರಳಿದ ಅನಿತಾ ಭಟ್‌ ಅವರಿಗೆ ಅನೇಕ ಚಿತ್ರದ ಆಫರ್‌ಗಳು ಬಂದಿವೆಯಂತೆ. ಬೆಂಗಳೂರು 69, ಥ್ರಿಲ್ಲರ್ ಸಿನಿಮಾ ಆಗಿದ್ದು, ತೆಲುಗು ಖಡ್ಗಂನ ನಾಯಕ‌ ನಟ ಶಫಿ ಜೊತೆ ಅನಿತಾ ತೆರೆ ಹಂಚಿಕೊಂಡಿದ್ದಾರೆ.

Edited By : Vijay Kumar
PublicNext

PublicNext

25/12/2020 01:43 pm

Cinque Terre

57.49 K

Cinque Terre

0

ಸಂಬಂಧಿತ ಸುದ್ದಿ