ಲವ್ ಮಾಕ್ಟೇಲ್ ಮಾದಕ ಸುಂದರಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಮದುವೆಗೆಡ ಡೇಟ್ ಫಿಕ್ಸ್ ಆಗಿದೆ. ಮೀನುಗಣ್ಣಿನ ಮಾನಿನಿ ಮಿಲನಾ ಅವರ ಬ್ಯಾಚುರಲ್ ಪಾರ್ಟಿ ಹೇಗಿತ್ತು ಗೊತ್ತಾ..? ಇಲ್ನೋಡಿ ಫೋಟೋಸ್
ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಸತಿಪತಿಗಳಾಗಲಿದ್ದಾರೆ. ಇದೀಗ ನಟಿ ತಮ್ಮ ಬ್ಯಾಚುರಲ್ ಪಾರ್ಟಿ ಎಂಜಾಯ್ ಮಾಡಿದ್ದಾರೆ. ಭಾವೀ ಪತಿ ಡಾರ್ಲಿಂಗ್ ಕೃಷ್ಣ ಮತ್ತು ಗಲ್ರ್ಸ್ ಗ್ಯಾಂಗ್ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ ನಟಿ.
ನನ್ನ ಗೊಂಬೆಯ ಬ್ಯಾಚುರಲ್ ಪಾರ್ಟಿ ಅಂತ ಕ್ಯಾಪ್ಶನ್ ಕೊಟ್ಟು ಕೃಷ್ಣ ಫೋಟೋ ಶೇರ್ ಮಾಡಿದ್ದಾರೆ. ನಟಿಯೂ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಚಂದದ ಫೋಟೋ ಅಪ್ ಮಾಡಿದ್ದಾರೆ.ವಿಶೇಷ ಅಂದ್ರೆ ಈ ಬ್ಯಾಚುರಲ್ ಪಾರ್ಟಿಯಲ್ಲಿ ಎಣ್ಣೆ ಇರಲಿಲ್ಲ. ಕೇಕ್ & ಕೂಲ್‌ಡ್ರಿಂಕ್ಸ್‌ನಲ್ಲಿ ಪಾರ್ಟಿ ನಡೆದಿರೋದು ವಿಶೇಷ.
PublicNext
22/12/2020 04:34 pm