ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾದ ವ್ಯಕ್ತಿ ಎಂದರೆ, ಅದು ನಿರ್ಮಾಪಕರೂ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಲಾಕ್‌ಡೌನ್ ಅವಧಿಯಲ್ಲಿ ಚಿತ್ರರಂಗ ಕೆಲಸವಿಲ್ಲದೇ ಕುಳಿತಿದ್ದಾಗ, ಸಾಲು ಸಾಲು ಸಿನಿಮಾಗಳನ್ನು ಸಿದ್ಧಪಡಿಸಿದ ಕೀರ್ತಿ ಆರ್‌ಜಿವಿಗೆ ಸಲ್ಲುತ್ತದೆ.
ತಮ್ಮದೇ ಓಟಿಟಿ ಪ್ಲಾಟ್‌ಫಾರ್ಮ್ ಮಾಡಿಕೊಂಡಿರುವ ಅವರು, ಅದರಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಿದ್ದರು. ಸದ್ಯ 'ಮರ್ಡರ್' ಅನ್ನೋ ಸಿನಿಮಾವನ್ನು ರಿಲೀಸ್‌ಗೆ ರೆಡಿ ಮಾಡಿದ್ದಾರೆ. ಟ್ರೇಲರ್‌ನಿಂದಲೇ ಗಮನಸೆಳೆದಿರುವ ಈ ಸಿನಿಮಾವನ್ನು ಈಗ ಕನ್ನಡದಲ್ಲೂ ಬಿಡುಗಡೆ ಮಾಡುವುದಕ್ಕೆ ಅವರು ಯೋಜಿಸಿದ್ದಾರೆ.
ನೈಜ ಘಟನೆ ಆಧರಿಸಿ ಸಿನಿಮಾ ಮಾಡುವ ಛಲವುಳ್ಳ ರಾಮ್ ಗೋಪಾಲ್ ವರ್ಮಾ ಈ ಸಲವೂ ಅಂತದ್ದೇ ಕಥೆ ಆಯ್ದುಕೊಂಡಿದ್ದಾರೆ. ಇಬ್ಬರ ಅಂತರ್ಜಾತಿ ಪ್ರೇಮಕ್ಕೆ ಎಲ್ಲರಿಂದಲೂ ವಿರೋಧ ಇರುತ್ತೆ. ಈ ವಿರೋಧದ ನಡುವೆಯೂ ಅವರು ಮದುವೆಯಾಗುತ್ತಾರೆ. ಇದು ಮರ್ಯಾದಾ ಹತ್ಯೆಗೆ ಕಾರಣವಾಗುತ್ತೆ. ಇದು ಆರ್ ಜಿ ವಿ ಸಿನಿಮಾದ ಕಥೆಯ ತಿರುಳು. ಈ ಬಾರಿ ಮಾರ್ಯಾದಾ ಹತ್ಯೆಯ ಒಳಸುಳಿಗಳ ಕುರಿತಾಗಿ ಸ್ಕ್ರಿಪ್ಟ್ ಮಾಡಲು ಅವರು ಮುಂದಾಗಿದ್ದಾರೆ.
PublicNext
15/12/2020 08:22 am