ಶಿವರಾಜ್ ಕುಮಾರ್ ಗೆ ವಯಸ್ಸಾದಷ್ಟು ಭಿನ್ನ-ವಿಭಿನ್ನ ಸಿನಿಮಾಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗಂಗತೂ ಶಿವಣ್ಣ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಸಿನಿಮಾಗಳಲ್ಲಿ ಒಂದಕ್ಕಿಂತಾ ಒಂದು ಭಿನ್ನ ಲುಕ್‌ಗಳಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಶಿವಣ್ಣ.
ಇದೀಗ ಶಿವಪ್ಪ ಎಂಬ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ತೊಡಗಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣನ ಹೊಸ ಲುಕ್ ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚಿತ್ರ ಸಖತ್ ವೈರಲ್ ಆಗಿದೆ.
ಜೈಲು ಖೈದಿಯ ಉಡುಪಿನಲ್ಲಿರುವ ಶಿವಣ್ಣನ ಫೋಟೊ ಇದಾಗಿದೆ. ಗುಂಗುರು ಕೂದಲು ಬಿಟ್ಟು, ತುಸುವೇ ಗಡ್ಡಧಾರಿಯಾಗಿ, ಕತ್ತಿಗೆ ಹುಲಿ ಉಗುರು ಕಟ್ಟಿಕೊಂಡಿರುವ ಶಿವಣ್ಣ ಸಖತ್ ಮಾಸ್ ಆಗಿ ಕಾಣುತ್ತಿದ್ದಾರೆ.
PublicNext
14/12/2020 02:42 pm