ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟ ನಟಿಯರ ಹೆಸರನ್ನು ಹೇಳಿಕೊಂಡು ಜನರಿಗೆ ಮೋಸ ಮಾಡುವ ಮಂದಿ ಸಾಕಷ್ಟಿದ್ದರೆ. ಇಂತಹ ದುರುಳರು ಹೆಸರಾಂತ ನಟ-ನಟಿಯರ ಹೆಸರಿನಲ್ಲಿ ಫೇಸ್‍ಬುಕ್ ಖಾತೆ ತೆರೆದು ಹಣ ಕೇಳಿರುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಈಗ ಈ ರೀತಿಯ ಪ್ರಕರಣದ ಬಗ್ಗೆ ಸ್ವತಃ ನಟ ಡಾಲಿ ಧನಂಜಯ್ ಅವರು ಟ್ವೀಟ್ ಮಾಡಿದ್ದಾರೆ.
ಈ ವಿಚಾರವಾಗಿ ಟಿಟ್ಟರಿನಲ್ಲಿ ಬರೆದುಕೊಂಡಿರುವ ಡಾಲಿ, ಈ ತರಹದ ಪೋಸ್ಟ್‍ಗಳನ್ನು ನಂಬಿ ಮೋಸ ಹೋಗಬೇಡಿ. ಈ ರೀತಿಯ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ. ಜೋಪಾನವಾಗಿರಿ, ಯಾವುದನ್ನೇ ನಂಬುವ ಮುನ್ನ ಅದನ್ನು ಒಂದು ಬಾರಿ ಪರೀಕ್ಷೆ ಮಾಡಿ. ಅದರಲ್ಲೂ ಯಾವುದನ್ನಾದರೂ ಮತ್ತು ಯಾರಾನ್ನದರೂ ಸೋಶಿಯಲ್ ಮೀಡಿಯಾದಲ್ಲಿ ನಂಬುವ ಮೊದಲು ಎಲ್ಲವನ್ನೂ ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ ಡಾಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದು, ಈ ಫೋಟೋದಲ್ಲಿ ಆಕಾಶ್ ಗೌಡ ಎಂಬ ಹೆಸರಿನ ವ್ಯಕ್ತಿ ಡಾಲಿಯವರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟಿನಲ್ಲಿ ನಮ್ಮ ಹೊಸ ಕನ್ನಡ ಸಿನಿಮಾಗೆ ವಿವಿಧ ಪಾತ್ರಗಳಲ್ಲಿ ನಟಿಸುವವರು ಬೇಕಾಗಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಸರ್ ಕೂಡ ನಟಿಸಲಿದ್ದಾರೆ. ಆಸಕ್ತಿ ಇದ್ದವರು ನಮಗೆ ಮಸೇಜ್ ಮಾಡಿ. ವೃತ್ತಿಪರರು ಮಾತ್ರ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡಿ ಗರಂ ಆಗಿರುವ ಡಾಲಿ ಇಂತವರನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
PublicNext
07/12/2020 12:59 pm