ಬೆಂಗಳೂರು: ಮಾದಕ ವಸ್ತು ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಐವರು ಆರೋಪಿಗಳ ತಲೆಕೂದಲು ಮಾದರಿ ಪರೀಕ್ಷೆ ನಡೆಸಲು ಸಿಸಿಬಿಗೆ ನ್ಯಾಯಾಲಯ ಅನುಮತಿ ನೀಡಿದೆ.
ಪ್ರರಕರಣದ ಸಂಬಂಧ ತಲೆಕೂದಲ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಆರೋಪಿಗಳು ಸಹಕರಿಸುತ್ತಿಲ್ಲ ಎಂದು ಸಿಸಿಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸಿಸಿಎಚ್ 33ನೇ ನ್ಯಾಯಾಲಯವು ರಾಗಿಣಿ, ಸಂಜನಾ, ರಾಹುಲ್ ತೋನ್ಸೆ, ಲೂಮ್ ಪೆಪ್ಪರ್ ಹಾಗೂ ರಿಯಾಜ್ ಮೊಹಮದ್ ತಲೆಕೂದಲು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಿ ಶುಕ್ರವಾರ ಆದೇಶ ನೀಡಿದೆ.
PublicNext
05/12/2020 04:26 pm