ಅಂಬರೀಷ್ ಅವರ 2ನೇ ಪುಣ್ಯ ಸ್ಮರಣೆಯ ಅಂಗವಾಗಿ ಸುಮಲತಾ ಹಾಗೂ ಅಭಿಷೇಕ್ ಅಂಬಿ ಸಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ.
ಬಳಿಕ ದರ್ಶನ್, ಸಹ ಸಮಾಧಿಯ ಬಳಿ ಹೋಗಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ರೆಬೆಲ್ ಅಂಬಿಯನ್ನು ಸ್ಮರಿಸುತ್ತಿದ್ದಾರೆ.
ಅವರೊಂದಿಗೆ ಕಳೆದ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ನಟಿ ಸುಮಲತಾ ಸಹ ತಮ್ಮ ಇನ್ ಸ್ಟಾಗ್ರಾಂನಲ್ಲಿ ದೀರ್ಘವಾಗಿ ಪತ್ರವೊಂದನ್ನು ಬರೆದು ತಮ್ಮ ನೋವನ್ನು ಹೊರ ಹಾಕಿದ್ದಾರೆ.
ರೆಬೆಲ್ ಕುಟುಂಬದ ಹಿರಿಯ ಮಗ ಎಂದೇ ಕರೆಸಿಕೊಳ್ಳುವ ದರ್ಶನ್ ಸಹ ಸೀನಿಯರ್ ಅಂಬಿಯನ್ನು ಸ್ಮರಿಸಿದ್ದಾರೆ.
ಅಂಬಿ ಬುದಕಿದ್ದಾಗ ದರ್ಶನ್ ಅವರನ್ನು ಹಿರಿಯ ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಅದಕ್ಕೆ ದರ್ಶನ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು.
ಅಂಬರೀಷ್ ಅವರು ಅಗಲಿದಾಗಲೂ ದರ್ಶನ್ ಹಿರಿಯ ಮಗನಂತೆ ನಿಂತು ತಮ್ಮ ಜವಾಬ್ದಾರಿ ನಿರ್ವಹಿಸಿದರು. ಅಪ್ಪ ಇಲ್ಲದ ಅಭಿಷೇಕ್ ಗೆ ಹಿರಿಯಣ್ಣನಾಗಿ ಬೆನ್ನ ಹಿಂದೆ ನಿಂತು ಬೆಂಬಲ ನೀಡುತ್ತಿದ್ದಾರೆ ಡಿಬಾಸ್.
ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್, ಅಂಬಿ ನನ್ನ ಜೊತೆ ಸದಾ ಇರುತ್ತಾರೆ. ಇವತ್ತು ಬಂದು ಪೂಜೆ ಮಾಡುತ್ತಿದ್ದೇವೆ ಅಷ್ಟೆ. ಅವರು ಬೈಯ್ಯುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.
ಅವರು ನನಗೆ ದೇವರಂತೆ. ಅವರನ್ನು ಸದಾ ಪೂಜಿಸುತ್ತೇನೆ ಎಂದಿದ್ದಾರೆ. ಅದಕ್ಕೂ ಮೊದಲು ದರ್ಶನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನೀಯರ್ ಅಂಬಿ ಅವರ ಕುರಿತಾಗಿ ಟ್ವೀಟ್ ಮಾಡುವ ಮೂಲಕ ಸ್ಮರಿಸಿದ್ದಾರೆ.
PublicNext
24/11/2020 03:05 pm