ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡಿ ಬಾಲಿವುಡ್ ನಟಿ ತಾಪ್ಸಿ ಪನ್ನು ದಂಡ ತೆತ್ತಿದ್ದಾರೆ.
ತಾಪ್ಸಿ ತಮ್ಮ ಮುಂದಿನ ಚಿತ್ರ 'ರಶ್ಮಿ ರಾಕೆಟ್' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ತಾವು ಬೈಕ್ ರೈಡಿಂಗ್ ಮಾಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, 'ಹೆಲ್ಮೆಟ್ ಇಲ್ಲದ್ದಕ್ಕಾಗಿ ದಂಡ ವಿಧಿಸುವುದಕ್ಕೂ ಮುನ್ನ' ಎಂಬ ಕ್ಯಾಪ್ಷನ್ ಅನ್ನು ಹಾಕಿದ್ದಾರೆ.
ನಟಿ ತಾಪ್ಸಿ ಪನ್ನು ಅವರಿಗೆ ದಂಡ ವಿಧಿಸಿರುವುದಕ್ಕಾಗಿ ಅನೇಕ ನಟ್ಟಿಗರು ಹಾಸ್ಯ ಮಾಡಿದ್ದಾರೆ. 'ರಶ್ಮಿ ರಾಕೆಟ್' ಸಿನಿಮಾ ರಶ್ಮಿ ಎಂಬ ಹೆಸರಿನ ಹುಡುಗಿ ಸಣ್ಣ ಗ್ರಾಮದಿಂದ ಅಥ್ಲೆಟಿಕ್ ಸ್ಪರ್ಧೆಗಳಿಗೆ ತೆರಳುವ ಕಥೆಯಾಗಿದೆ.
PublicNext
19/11/2020 10:03 am