ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಯಾನ್ ಇಂಡಿಯಾ 'ಗಮನಂ' ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬಂದ್ರು ಶ್ರೇಯಾ

ಚಂದನವನದ ನಿರ್ದೇಶಕಿ ರೂಪಾ ಅಯ್ಯರ್ 'ಚಂದ್ರ' ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಜೊತೆಯಾಗಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ದರ್ಶನ ಕೊಟ್ಟ ನಟಿ ಶ್ರೇಯಾ ಮತ್ತೆ ಸದ್ಧಿಲ್ಲದೆ ಮಾಯವಾಗಿದ್ದರು.

ಆದ್ರೆ ಇದೀಗ ಟೈಟಲ್ ಪೋಸ್ಟರ್ ಮೂಲಕವೇ ಸಖತ್ ಕ್ರೇಜ್ ಹುಟ್ಟುಹಾಕಿರುವ ಬಹು ಭಾಷಾ ಚಿತ್ರವೊಂದರ ಮೂಲಕ ಮತ್ತೆ ತೆರೆಯ ಮೂಲಕ ಕನ್ನಡಿಗರನ್ನ ತಲುಪಲು ಶ್ರೇಯಾ ಸಜ್ಜಾಗಿದ್ದಾರೆ ಆ ಸಿನಿಮಾ ಹೆಸರೇ "ಗಮನಂ" ಕನ್ನಡ, ತೆಲುಗು, ತಮಿಳು, ಮಲಿಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರುತ್ತಿದ್ದು ಆ ಮೂಲಕ ಶ್ರೇಯಾ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಮಹಿಳಾ ಪ್ರಧಾನ ಚಿತ್ರಕಥೆ ಒಳಗೊಂಡಿರುವ ಸಿನಿಮಾ ಇದಾಗಿದ್ದು ಶ್ರೇಯಾ ಹುಟ್ಟು ಹಬ್ಬದ ನಿಮಿತ್ತ ಚಿತ್ರತಂಡ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿತ್ತು.

ಈ ಪೋಸ್ಟರ್ ಸಿನಿ ಪ್ರೀಯರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದಲ್ಲದೆ ಚಂದ್ರ ಸಿನಿಮಾ ನಂತರ ತುಂಬಾ ದಿನ ಕಳೆದು ಶ್ರೇಯಾ ನಟನೆಗೆ ಮರಳಿದ್ದು ಗಮನಂ ಸಿನಿಮಾ ನೈಜ ಘಟನೆಯನ್ನಾಧರಿಸಿ ತಯಾರಾಗುತ್ತಿರುವ ಚಿತ್ರ ಎಂದು ಹೇಳಲಾಗಿದ್ದು ಗಣನ್ ಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಲಿದ್ದು ತೆಲುಗಿನಲ್ಲಿ ಇದೇ ಸಿನಿಮಾದ ಟ್ರೇಲರ್ ಅನ್ನು ಪವನ್ ಕಲ್ಯಾಣ್, ಹಿಂದಿಯಲ್ಲಿ ಸೋನು ಸೂದ್, ತಮಿಳಿನಲ್ಲಿ ಜಯಂ ರವಿ, ಮಲಯಾಳಂ ನಲ್ಲಿ ಫಹಾದ್ ಫಾಸಿಲ್ ಅವರು ಗಮನಂ ಸಿನಿಮಾದ ಟ್ರೇಲರ್ ಅನ್ನು ಅದೇ ನವೆಂಬರ್ 11 ರಂದು ಬೆಳಿಗ್ಗೆ ಬಿಡುಗಡೆ ಮಾಡಲಿದ್ದಾರೆ.

Edited By : Nirmala Aralikatti
PublicNext

PublicNext

11/11/2020 05:24 pm

Cinque Terre

35.72 K

Cinque Terre

2