ಕಾರವಾರ: 12 ವರ್ಷದಿಂದ ಕಾಯುತ್ತಿದ್ದ ವೃದ್ಧೆಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಭೇಟಿಯಾಗಿದ್ದಾರೆ.
ಹೌದು. ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಲು ವೃದ್ಧೆ ಕರಿಯವ್ವ ಕಳೆದ ೧೨ ವರ್ಷಗಳಿಂದ ಕಾಯುತ್ತಿದ್ದರು. ಈ ಆಸೆ ಕೊನೆಗೂ ಈಡೇರಿದೆ. ಉತ್ತರ ಕನ್ನಡ ಜಿಲ್ಲೆ ಜೋಯಿಡಾದ ಬಾಳೆಗೌಡ ನಾಯ್ಕ್ ಹಾಗೂ ಅವರ ಪತ್ನಿ ಕರಿಯವ್ವ ಇಬ್ಬರೂ ಡಾ.ರಾಜ್ ಕುಮಾರ್ರ ಅಭಿಮಾನಿಗಳು. ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್ ಜೊತೆಗೆ ಬಾಳೆಗೌಡ ನಾಯ್ಕ್ ಕೂಡ ಪಾಲ್ಗೊಂಡಿದ್ದರು. ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಲು 75 ವರ್ಷದ ಕರಿಯವ್ವ ಕಾಯುತ್ತಿದ್ದರು.
ಪುನೀತ್ ರಾಜಕುಮಾರ್ ಅವರು ಸಿನಿಮಾ ಶೂಟಿಂಗ್ ಹಿನ್ನೆಲೆಯಲ್ಲಿ ಜೋಯಿಡಾಗೆ ಆಗಮಿಸಿದ್ದರು. ಈ ವೇಳೆ ಕರಿಯವ್ವ ಅವರ ಪ್ರೀತಿ ಹಾಗೂ ಅಭಿಮಾನವನ್ನು ಕಂಡು ಪುನೀತ್ ರಾಜ್‌ಕುಮಾರ್ ಭಾವುಕರಾದರು. ಬಳಿಕ ಫೋಟೋ ಕ್ಲಿಕ್ಕಿಸಿಕೊಂಡರು.
PublicNext
09/11/2020 04:36 pm