ನಟ, ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿ ಒಂದು ಸಿನಿಮಾವನ್ನು ಈ ರೀತಿಯಲ್ಲೂ ಪ್ರೇಕ್ಷಕನಿಗೆ ಕಟ್ಟಿ ಕೊಡಬಹುದು ಮತ್ತು ಆ ಚಿತ್ರವನ್ನು ಪ್ರೇಕ್ಷಕ ಸ್ವೀಕರಿಸಬಲ್ಲ ಎಂಬ ಅಂಶವನ್ನು ಸ್ವಾಂಡಲ್‌ವುಡ್‌ಗೆ ಪರಿಚಯಿಸಿ ಅತೀ ಕಡಿಮೆ ಅವಧಿಯಲ್ಲಿ ಹೆಸರು ಸಂಪಾದಿಸಿವರು.
ಈಗಾಗಲೇ ರಿಕ್ಕಿ, ಕಿರಿಕ್ ಪಾರ್ಟಿ, ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರಗಳ ನಿರ್ದೇಶನದ ಜೊತೆ ಬೆಲ್ ಬಾಟಮ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಲಿಡ್ ರೂಲ್ ನಟನೆಯನ್ನ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಈದೀಗ ಬೇರೊಬ್ಬರ ನಿರ್ದೇಶನದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿದ್ದ ಗಿರಿಕೃಷ್ಣ ರಿಷಬ್ ಶೆಟ್ಟಿಗೆ ಆಕ್ಷ್ಯನ್ ಕಟ್ ಹೇಳಲಿದ್ದು, ರಿಷಬ್ ಶೆಟ್ಟಿ ತಮ್ಮ ಸಿನಿ ಜೀವನದ ಮೂರನೇ ಸಿನಿಮಾದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ.
ಈ ಚಿತ್ರದ ಹೆಸರೇ ವಿಶೇಷವಾಗಿದ್ದು "ಹರಿಕಥೆ ಬದಲಾಗಿ ಗಿರಿಕಥೆ"ಯನ್ನ ತೆರೆಯ ಮೇಲೆ ತರಲು ಪ್ರಯತ್ನ ಆರಂಭವಾಗಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಇಂಡಿಪೆಂಡೆಂಟ್ ಫಿಲಂ ಮೇಕರ್ ಆಗಿ ಅಭಿನಯಿಸಲಿದ್ದು, ಈ ಚಿತ್ರದಲ್ಲಿ ತಪಶ್ವಿನಿ ಮತ್ತು ಲವ್ ಮಾಕ್ಟೇಲ್ ಸಿನಿಮಾದ ನಟಿ ರಚನಾ ಸೇರಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ.
ತಪಶ್ವಿನಿ ಎಂಬ ನಾಯಕಿಗೆ ಇದೇ ಮೊದಲ ಸಿನಿ ಪ್ರಯತ್ನವಾಗಿದ್ದು, ಚಿತ್ರದ ಹೆಚ್ಚಿನ ಭಾಗವನ್ನು ಮೈಸೂರಿನಲ್ಲೇ ಚಿತ್ರೀಕರಿಸುವ ಗುರಿಯನ್ನು ಸಿನಿಮಾ ತಂಡ ಹೊಂದಿದೆ ಎನ್ನಲಾಗ್ತಿದೆ. ಈ ಸಿನಿಮಾ ಅಲ್ಲದೆ ರಿಷಬ್ ಶೆಟ್ಟಿ ಗರುಡ ಗಮನ ವೃಷಭ ವಾಹನ, ಲಾಫಿಂಗ್ ಬುದ್ಧ, ರುದ್ರಪ್ರಯಾಗ, ನಾಥೂರಾಮ್ ಗೋಡ್ಸೆ ಚಿತ್ರಗಳು ಸಹ ತೆರೆಗೆ ಬರಲಿವೆ.
PublicNext
02/11/2020 05:19 pm