ಮುಂಬೈ: ಬಹುಭಾಷಾ ನಟಿ ಮಾಳವಿ ಮಲ್ಹೋತ್ರಾ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾ್ಇದೆ.
ಯೋಗೇಶ್ ಕುಮಾರ್ ಹಲ್ಲೆ ಮಾಡಿದ ಆರೋಪಿ. ನಿರ್ಮಾಪಕ ಅಂತ ಹೇಳಿಕೊಂಡಿರುವ ಯೋಗೇಶ್ ಹಾಗೂ ಮಾಳವಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ತನ್ನ ಪ್ರೀತಿಯ ಪ್ರಸ್ತಾಪವನ್ನು ಮಾಳವಿ ತಿರಸ್ಕರಿಸಿದ್ದರಿಂದ ಯೋಗೇಶ್ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊಲೆ ಯತ್ನ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗೆ ಬಲೆ ಬೀಸಿದ್ದಾರೆ. ಇತ್ತ ನಟಿಯ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
27/10/2020 05:22 pm