ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾದಕ ನಟಿಯರ ಬೇಲ್‌ಗಾಗಿ ನ್ಯಾಯಾಧೀಶರು ಸೇರಿ ಸಿಸಿಬಿ ತನಿಖಾಧಿಕಾರಿಗಳಿಗೆ ಬೆದರಿಕೆ ಪತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾಗೆ ಜಾಮೀನು ನೀಡಬೇಕು ಎಂದು ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶರು ಸೇರಿ ಸಿಸಿಬಿ ತನಿಖಾಧಿಕಾರಿಗಳಿಗೆ ಬೆದರಿಕೆ ಪತ್ರ ಬಂದಿದೆ.

ನಟಿಯರಿಗೆ ಜಾಮೀನು ಸಿಗದಿದ್ದರೆ ಕಮಿಷನರ್ ಕಚೇರಿ ಮತ್ತು ಸಿಟಿ ಸಿವಿಲ್ ಕೋರ್ಟಿಗೆ ಬೆದರಿಕೆ ಪತ್ರ ಬಂದಿದೆ. ಪತ್ರದ ಜೊತೆಗೆ ಕಮೀಷನರ್ ಕಚೇರಿಗೆ ಬಂಡೆ ಒಡೆಯುವ ಸ್ಫೋಟಕ ರವಾನೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಬಾಂಬ್ ಸ್ಕ್ವಾಡ್ ಮತ್ತು ಶ್ವಾನ ದಳದಿಂದ ಪತ್ರದ ಒಳಗಿದ್ದ ವೈರ್ ತೆಗೆಯಲಾಗಿದೆ. ಬಾಂಬ್ ಪತ್ರ ಹುಸಿ ಪತ್ರ ಎನ್ನುವುದು ಗೊತ್ತಾಗಿದ್ದು, ತುಮಕೂರಿನ ಕಡೆಯಿಂದ ಬಂದಿದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Edited By : Vijay Kumar
PublicNext

PublicNext

20/10/2020 12:03 am

Cinque Terre

43.47 K

Cinque Terre

4

ಸಂಬಂಧಿತ ಸುದ್ದಿ