ಸಾಮಾಜಿಕ ಜಾಲತಾಣ ಎಂಬುದು ಎಲ್ಲರ ಪಾಲಿಗೆ ವರವೂ ಹೌದು, ಶಾಪವೂ ಹೌದು. ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರಲು ಸೋಶಿಯಲ್ ಮೀಡಿಯಾ ಅನ್ನೋದು ಸೆಲೆಬ್ರೆಟಿಗಳಿಗೆ ತುಂಬಾನೇ ಸಹಾಯ ಕಾರಿ. ಆದರೆ, ಕೆಲವೊಮ್ಮೆ ಅಭಿಮಾನಿಗಳು ಟ್ರೋಲ್ ಮಾಡುವ ವಿಚಾರ ಸೆಲೆಬ್ರೆಟಿಗಳಿಗೆ ಸಾಕಷ್ಟು ಬೇಸರ ಮೂಡಿಸುತ್ತದೆ.
ಈಗ ನಟಿ ಪ್ರಿಯಾ ವಾರಿಯರ್ ವಿಚಾರದಲ್ಲೂ ಇದೇ ರೀತಿ ಆಗಿದೆ. ಇತ್ತೀಚೆಗೆ ಅವರು ಹಾಕಿರುವ ಫೋಟೋಗಳು ಟ್ರೋಲ್ ಆಗಿದ್ದು ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ.
ನಟಿ ಪ್ರಿಯಾ ವಾರಿಯರ್ ಬೋಲ್ಡ್ ಫೋಟೋಗಳನ್ನು ಹಾಕಿದ್ದರು. ಈ ವೇಳೆ ಅನೇಕರು ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಅಲ್ಲದೆ, ಈ ರೀತಿ ಫೋಟೋಗಳನ್ನು ಹಾಕುವ ಅವಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ಉತ್ತರ ನೀಡಿರುವ ನಟಿ ಪ್ರಿಯಾ ವಾರಿಯರ್ "ನಾನು ನನ್ನ ಪೋಸ್ಟ್ ನಲ್ಲಿ ಕೆಲವು ಕಮೆಂಟ್ಗಳನ್ನು ನೋಡಿದೆ. ನಾನು ಸಾಮಾನ್ಯವಾಗಿ ಕಮೆಂಟ್ ಗಳನ್ನು ನೋಡುವುದಿಲ್ಲ. ಆದರೆ, ಎದುರಿನಲ್ಲೇ ನಾಲ್ಕೈದು ಅಶ್ಲೀಲ ಕಮೆಂಟ್ ಗಳು ಕಂಡಿದ್ದರಿಂದ ಅವರಿಗೆ ಉತ್ತರಿಸಬೇಕಾಯಿತು ಎಂದು ಮಾತು ಆರಂಭಿಸಿದ್ದಾರೆ.
"ನನಗೆ ಈ ವಿಚಾರ ಹೊಸದಲ್ಲ. ಆರಂಭದಿಂದಲೂ ನಾನು ಇದನ್ನು ಎದುರಿಸುತ್ತಲೇ ಬಂದಿದ್ದೇನೆ. ಆದರೆ, ಈ ರೀತಿಯ ವಿಚಾರಗಳನ್ನು ಎದುರಿಸಿಯೂ ನಾನು ಇಲ್ಲಿಯವರೆಗೆ ಬಂದಿರುವುದಕ್ಕೆ ಖುಷಿ ಇದೆ" ಎಂದು ಅವರು ತಿಳಿಸಿದ್ದಾರೆ.
PublicNext
15/10/2020 07:58 pm