ಕಿರಿಕ್ ಪಾರ್ಟಿ ಸಾನ್ವಿ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು, ನಂತರ ತೆಲುಗು ಚಿತ್ರರಂಗ ಕ್ಕೆ ಕಾಲಿಟ್ಟು, ಅಲ್ಲಿ ಕೂಡ ಬಹಳ ಫೇಮಸ್ ಆದವರು. ಕನ್ನಡಕ್ಕಿಂತಲೂ ತೆಲುಗಿನಲ್ಲೇ ಈ ನಟಿಗೆ ಬಹಳ ಬೇಡಿಕೆ ಇದೆ. ತೆಲುಗು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸ್ಟಾರ್ ನಟಿ ಪಟ್ಟಗಳಿಸಿದ್ದಾರೆ ರಶ್ಮಿಕಾ. ಇದೀಗ ತಮಿಳು ಚಿತ್ರರಂಗಕ್ಕೂ ಸಹ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಸುಲ್ತಾನ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ನಮಗೆಲ್ಲರಿಗೂ, ಇದೀಗ ಸುಲ್ತಾನ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು, ಈ ವಿಷಯವಾಗಿ ಪೋಸ್ಟ್ ಮಾಡಿದ್ದಾರೆ ರಶ್ಮಿಕಾ.
ಹೀಗೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿರುವ ರಶ್ಮಿಕಾ ಮಂದಣ್ಣ ಭಾರತದ ಎಲ್ಲೆಡೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ರಶ್ಮಿಕಾ ತಮಿಳು ಚಿತ್ರರಂಗದಲ್ಲೂ ಇಷ್ಟೇ ಜನಪ್ರಿಯತೆ ಗಳಿಸುತ್ತಾರಾ? ಎಂದು ಕಾದು ನೋಡಬೇಕಾಗಿದೆ.
ತಮಿಳಿನ ಹೆಸರಾಂತ ನಟ ಕಾರ್ತಿ ಅವರೊಡನೆ ರಶ್ಮಿಕಾ ನಟಿಸುತ್ತಿರುವ "ಸುಲ್ತಾನ್" ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ರಶ್ಮಿಕಾ. ನನ್ನ ಮೊದಲ ತಮಿಳು ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಈ ಎಲ್ಲಾ ಪ್ರೀತಿಪಾತ್ರರ ಜೊತೆ ನಾನು ಕೆಲಸ ಮಾಡಿದ್ದು ಬಹಳ ಖುಷಿ ಕೊಟ್ಟಿದೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
PublicNext
08/10/2020 07:15 pm