ಐದು ಭಾಷೆಗಳಲ್ಲಿ ತೆರೆಕಂಡು ಹೊಸ ದಾಖಲೆ ನಿರ್ಮಿಸಿ ಸ್ಯಾಂಡಲ್ವುಡ್ನತ್ತ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್ ಚಾಪ್ಟರ್ 1, ಈಗ ಕೆಜಿಎಫ್ ಎರಡನೇ ಭಾಗಕ್ಕಾಗಿ ಸಿನಿಪ್ರಿಯರು ಕಾತರರಾಗಿ ಕಾಯುತ್ತಿದ್ದಾರೆ.
ಕೊರೋನಾ ಲಾಕ್ಡೌನ್ ಹಿನ್ನಲೆ ನಿಂತಿದ್ದ ಸಿನಿಮಾ ಶೂಟಿಂಗ್ ಲಾಕ್ಡೌನ್ ಅನ್ಲಾಕ್ ಆಗುತ್ತಿದ್ದಂತೆಯೇ ಈಗ ಈ ಸಿನಿಮಾ ಚಿತ್ರೀಕರಣ ಮತ್ತೆ ಆರಂಭವಾಗಿದೆ.
ಲಾಕ್ಡೌನ್ ಅನ್ಲಾಕ್ ಆಗುತ್ತಿದ್ದಂತೆಯೇ ಮೊದಲ ಶೆಡ್ಯೂಲ್ನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಇದರಲ್ಲಿ ಮಾಳವೀಕಾ ಹಾಗೂ ಪ್ರಕಾಶ್ ರೈ ಭಾಗಿಯಾಗಿದ್ದರು. ಅದು ಮುಗಿಯುತ್ತಿದ್ದಂತೆಯೇ ಈಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.
ಈಗ ಸಿನಿಮಾದ ನಾಯಕ ರಾಕಿಂಗ್ ಸ್ಟಾರ್ ಯಶ್ ಮಂಗಳೂರು ಸೇರಿಕೊಂಡಿದ್ದಾರೆ. ಕಡಲ ಕಿನಾರೆಯಲ್ಲಿ ನಿಂತಿರುವ ಸಖತ್ ಸ್ಟೈಲಿಶ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ನಿಂತಿರುವ ರೀತಿ ನೋಡಿದರೆ, ಕೆಜಿಎಫ್ ಸಿನಿಮಾದಲ್ಲಿ ಬರುವ ಒಂದು ದೃಶ್ಯ ನೆನಪಿಗೆ ಬರುತ್ತದೆ. ಮುಂಬೈಗೆ ಕಾಲಿಡುವ ಬಾಲಕ ಕಡಲ ಕಿನಾರಿಯಲ್ಲಿ ನಿಂತಿರುವ ದೃಶ್ಯ.
ತಮ್ಮ ಫೋಟೋ ಜೊತೆಗೆ ಸಿನಿಮಾ ಚಿತ್ರೀಕರಣ ಆರಂಭವಾಗಿರುವ ಬಗ್ಗೆ ಪಂಚಿಂಗ್ ಲೈನ್ಗಳನ್ನೂ ಬರೆದುಕೊಂಡಿದ್ದಾರೆ. ಅಲೆಗಳನ್ನು ತಡೆಯಲಾಗುವುದಿಲ್ಲ. ಆದರೆ ನೀನು ತೇಲುವುದನ್ನು ಕಲಿಯಬಹುದು. ದೊಡ್ಡ ವಿರಾಮದ ನಂತರ ರಾಕಿ ಸೆಟ್ ತಮ್ಮ ಇಂದಿನಿಂದ ತೇಲಲಾರಂಭಿಸಿದೆ ಎಂದು ಸಿನಿಮಾ ಶೂಟಿಂಗ್ ಆರಂಭವಾಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
PublicNext
08/10/2020 06:18 pm