ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಟಲ್ ಸುರಂಗ ಮಾರ್ಗದಲ್ಲಿ ಫೋಟೋ ಕ್ಲಿಕಿಸಿಕೊಂಡ ನಟಿ ಪ್ರಣೀತಾ ಸುಭಾಷ್..!

ನಟಿ ಪ್ರಣೀತಾ ಸುಭಾಷ್ ಹಿಮಾಚಲಪ್ರದೇಶದ ನಲ್ಲಿ ನಿರ್ಮಾಣವಾಗಿರುವ ಅಟಲ್ ಸುರಂಗ ಮಾರ್ಗದಲ್ಲಿ ಸುತ್ತಾಡಿದ್ದಾರೆ.

ಸದ್ಯ ತಮ್ಮ ಬಾಲಿವುಡ್ ಸಿನಿಮಾದ ಚಿತ್ರೀಕರಣಕ್ಕಾಗಿ ಹಿಮಾಚಲಪ್ರದೇಶ ತಲುಪಿಸಿರುವ ಪ್ರಣೀತಾ ಸುಭಾಷ್ ಅಟಲ್ ಟನಲ್ನಲ್ಲಿ ಪ್ರಯಾಣ ಮಾಡಿದ್ದಾರೆ.

ಪ್ರಯಾಣದ ವೇಳೆ ಸುರಂಗ ಮಾರ್ಗದಲ್ಲಿ ಇಳಿದು ಅಲ್ಲಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುತ್ತಿದ್ದಂತೆಯೇ ಈ ಸುರಂಗ ಮಾರ್ಗದಲ್ಲಿ ಪ್ರಯಾಣ ಮಾಡುವ ಅವಕಾಶ ಸಿಕ್ಕಿದೆ ಎಂದು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಟಿ ಪ್ರಣೀತಾ

ಈ ಸುರಂಗ ಮಾರ್ಗದಿಂದಾಗಿ ಮನಾಲಿ ಹಾಗೂ ಲೇಹ್ ನಡುವಿನ 46 ಕಿ.ಮೀ. ಅಂತರ ಕಡಿಮೆ ಆಗಲಿದೆ. ಇದರಿಂದಾಗಿ 4ರಿಂದ 5 ಗಂಟೆ ಸಮಯವೂ ಉಳಿತಾಯವಾಗಲಿದೆ.

ಪ್ರಣೀತಾ ಸುಭಾಷ್ ತಮ್ಮ ಬಾಲಿವುಡ್ ಸಿನಿಮಾ ಹಂಗಾಮ 2 ಚಿತ್ರತಂಡದೊಂದಿಗೆ ಇತ್ತೀಚೆಗಷ್ಟೆ ಮನಾಲಿ ತಲುಪಿದ್ದಾರೆ.

ಹಂಗಾಮ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಜೊತೆ ಇದೇ ಮೊದಲ ಬಾರಿಗೆ ಪ್ರಣೀತಾ ಸುಭಾಷ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ತಂಡ ಲಾಕ್ ಡೌನ್ ನಂತರ ಈಗ ಮತ್ತೆ ಚಿತ್ರೀಕರಣ ಆರಂಭಿಸಿದೆ.

Edited By : Nirmala Aralikatti
PublicNext

PublicNext

08/10/2020 08:17 am

Cinque Terre

81.46 K

Cinque Terre

0

ಸಂಬಂಧಿತ ಸುದ್ದಿ