ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು : ಶ್ರೀ ಗಾಳಿ ಮಾರಮ್ಮ ದೇವರ ಸಂಭ್ರಮದ ಗಂಗಾ ಪೂಜೆ

ಮೊಳಕಾಲ್ಮುರು : ಪಟ್ಟಣದ ಎದ್ದುಲಬೊಮ್ಮಯ್ಯನಹಟ್ಟಿಯ ಶ್ರೀ ಗಾಳಿ ಮಾರಮ್ಮ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಆಚರಣೆಗಳನ್ನು ಅನುಸರಿಸುವ ಮೂಲಕ ವಿಜೃಂಭಣೆಯಿಂದ ಗಂಗಾ ಪೂಜೆ ನೆರವೇರಿಸಲಾಯಿತು.

ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ಇಲ್ಲಿನ ಜನರ ಕೃಷಿ ಜೊತೆಗೆ ಮುಖ್ಯ ಉಪಕಸುಬು ಆಗಿರುವ ಕುರಿ ಸಾಕಾಣಿಕೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ, ಗಂಗಾ ಪೂಜೆಯ ಸಂದರ್ಭದಲ್ಲಿ ಕುರಿ ಮೇಕೆ ಮತ್ತು ಜಾನುವಾರುಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಿ ಪೂಜೆ ನಡೆಸಲಾಯಿತು.

ಪ್ರತಿ ವರ್ಷ ಪರಂಪರೆಯಂತೆ ನಡೆದುಕೊಂಡು ಬರುತ್ತಿರುವ ಈ ಪೂಜೆಗೆ ಮೊಳಕಾಲ್ಮೂರು ಪಟ್ಟಣ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಮಂಗಳವಾರದಂದು ಗಂಗಾ ಪೂಜೆಯ ನಿಮಿತ್ತ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲಾಯಿತು.ಪೂಜೆಯ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

20/11/2024 10:30 am

Cinque Terre

2.5 K

Cinque Terre

0

ಸಂಬಂಧಿತ ಸುದ್ದಿ