ಆರೋಗ್ಯ ಸಚಿವರ ತವರೂರಲ್ಲೇ ಅಂಬುಲೆನ್ಸ್ ಇಲ್ಲದೆ ರಾತ್ರಿಯಿಡೀ ರೋಗಿಗಳು ಪರದಾಟ ನಡೆಸಿದ್ದಾರೆ.
ಹೌದು ! ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತವರಿನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಕೇಳುವವರಿಲ್ಲ. ಆಂಬ್ಯುಲೆನ್ಸ್ ಇದ್ದರೂ ಆಂಬ್ಯುಲೆನ್ಸ್ ಇಲ್ಲ ಅಂತ ಬೇಜವಾಬ್ದಾರಿ ಉತ್ತರವನ್ನ ಆಸ್ಪತ್ರೆಯ ವೈದ್ಯರು ನೀಡುತ್ತಿದ್ದಾರೆ.
ರೋಗಿಯನ್ನು ಜಿಲ್ಲಾಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ಸಾಗಿಸಬೇಕಿತ್ತು. ಆದರೆ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲ ಅನ್ನೋ ಉಡಾಫೆ ಉತ್ತರ ವೈದ್ಯರದ್ದು. ಆಸ್ಪತ್ರೆಯ ಬೇಸ್ಮೆಂಟ್'ನಲ್ಲಿ ಎರಡು ಅಂಬುಲೆನ್ಸ್ ಇದ್ರೂ ಆಂಬ್ಯುಲೆನ್ಸ್ ಇಲ್ಲ ಎಂದಿದ್ದಾರೆ. ಖಾಸಗಿ ಆಂಬ್ಯುಲೆನ್ಸ್ ಮಾಡಿಕೊಂಡು ಹೋಗಿ ಅಂತ ವೈದ್ಯರು ಉಡಾಫೆ ಉತ್ತರ ನೀಡಿದ್ದಾರೆ. ಆಂಬ್ಯುಲೆನ್ಸ್ ಇಲ್ಲದೆ ರಾತ್ರಿಯಿಡೀ ಬಡಪಾಯಿ ರೋಗಿಯ ಸಂಬಂಧಿಕರ ಪರದಾಟ ಹೇಳತೀರದಾಗಿದೆ. ಅಪಘಾತದಲ್ಲಿ ಕಾಲು ಮುರಿದು ಗಂಭೀರ ಗಾಯಗೊಂಡಿದ್ದ ರೋಗಿಯ ಪರದಾಟವಂತೂ ಮನಕಲಕುವಂತಿತ್ತು.
ದೇವನಹಳ್ಳಿ ತಾಲ್ಲೂಕಿನ ವಿಜಯಪುರದ ರೋಗಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ! ಆ ರೋಗಿಯೂ ಆಂಬ್ಯುಲೆನ್ಸ್ ಇಲ್ಲದೇ ಪರದಾಟ ನಡೆಸಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರಿನಲ್ಲೇ ಈ ರೀತಿಯಾದರೆ ಬೇರೆಯ ಆಸ್ಪತ್ರೆಗಳ ಕಥೆ ಏನು ಅನ್ನೋ ಪ್ರಶ್ನೆ ನಿರ್ಮಾಣವಾಗಿದೆ.
PublicNext
07/10/2022 06:03 pm