ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ರಸ್ತೆ ಗುಂಡಿಗಳಿಗೆ ಪೂಜೆ ಮಾಡಿ ಕೆ,ಆರ್,ಎಸ್ ಪಕ್ಷದಿಂದ ವಿನೂತನ ಪ್ರತಿಭಟನೆ

ಚಿಂತಾಮಣಿ: ನಗರದ ಚೇಳೂರು ರಸ್ತೆ ಎ.ಪಿ.ಎಂ.ಸಿ ಮಾರುಕಟ್ಟೆ ರಸ್ತೆ ಹಾಗೂ ನಗರ ಭಾಗದ ಮುಖ್ಯ ರಸ್ತೆಗಳು ಹಲವಾರು ಕಡೆಗಳಲ್ಲಿ ಹೊಂಡ, ಗುಂಡಿಗಳು ಕೂಡಿದ್ದು, ವಾಹನ ಸವಾರರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದನ್ನು ಖಂಡಿಸಿ ಕೆ,ಆರ್,ಎಸ್ ಪಕ್ಷದ ಪದಾಧಿಕಾರಿಗಳು ನಗರದ ಚೇಳೂರು ರಸ್ತೆಯಲ್ಲಿ ಗುಂಡಿಗಳಿಗೆ ಪೂಜೆ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ವಾಹನ ಸವಾರರ ತಮ್ಮ ಜೀವ ಅಂಗೈಯಲ್ಲಿ ಇಟ್ಟುಕೊಂಡು ಸಂಚಾರ ಮಾಡುತ್ತಿದ್ದಾರೆ. ಈ ರಸ್ತೆ ಗುಂಡಿಗಳ ಕಾಟ ಯಾವಾಗ ಸರಿ ಹೋಗುತ್ತೋ ಅಂತಾ ವಾಹನಸವಾರರು ಹೈರಾಣಾಗಿ ಹೋಗಿದ್ದಾರೆ.

Edited By :
PublicNext

PublicNext

24/09/2022 11:13 am

Cinque Terre

21.49 K

Cinque Terre

0