ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲ್ಯಾಪ್‌ಟಾಪ್ ಬೆಲೆ 1 ಲಕ್ಷದಿಂದ 40,000 ರೂ.ಗೆ ಇಳಿಕೆ; ವೇದಾಂತ ಚೇರ್‌ಮನ್

ಗುಜರಾತ್‌: ಪ್ರಸ್ತುತ ರೂ 1 ಲಕ್ಷ ಬೆಲೆಯ ಲ್ಯಾಪ್‌ಟಾಪ್‌ಗಳು ರೂ 40,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುತ್ತವೆ. ಇದಕ್ಕಾಗಿ ಭಾರತ ನಿರ್ಮಿತ ಸೆಮಿಕಂಡಕ್ಟರ್‌ಗಳಿಗೆ ಧನ್ಯವಾದಗಳು ಎಂದು ವೇದಾಂತ ಚೇರ್‌ಮನ್ ಅನಿಲ್ ಅಗರ್ವಾಲ್ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವೇದಾಂತ ಚೇರ್‌ಮನ್ ಈಗ ವೇದಾಂತ-ಫಾಕ್ಸ್‌ಕಾನ್ ಗುಜರಾತ್‌ನಲ್ಲಿ ದೇಶದ ಮೊದಲ ಸೆಮಿಕಂಡಕ್ಟರ್ ಉತ್ಪಾದನಾ ಘಟಕದೊಂದಿಗೆ ಭಾರತದ ಟೆಕ್ ಲ್ಯಾಂಡ್‌ಸ್ಕೇಪ್ ಅನ್ನೇ ಬದಲಾವಣೆ ಮಾಡಲು ಸಿದ್ಧವಾಗಿದೆ ಎಂದಿದ್ದಾರೆ.

ಜಾಗತಿಕ ಚಿಪ್ ಕೊರತೆಯಿಂದಾಗಿ ಪೂರೈಕೆಯ ಸಮಸ್ಯೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆಯಾದ ಲ್ಯಾಪ್‌ಟಾಪ್‌ನ ಸರಾಸರಿ ಬೆಲೆ ರೂಪಾಯಿ 60,000 ಮೀರಿ ಏರಿತು. ಆದರೆ ದುಬಾರಿ ಎಲೆಕ್ಟ್ರಾನಿಕ್ಸ್ ಬೇಡಿಕೆಯ ಮೇಲೆ ಪರಿಣಾಮ ಬೀರಲಿಲ್ಲ. ಏಕೆಂದರೆ 2022ರ ಮೊದಲ ತ್ರೈಮಾಸಿಕದಲ್ಲಿ ದಾಖಲೆಯ 5.8 ಮಿಲಿಯನ್ ಪಿಸಿ ಸಾಗಣೆಗಳು ಭಾರತೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದೆ.

ಭಾರತದಲ್ಲಿ ಕಾಂಪನೆಂಟ್‌ಗಳ ತಯಾರಿ ತೈವಾನ್ ಮತ್ತು ಕೊರಿಯಾದಲ್ಲಿ ತಯಾರಿಸುತ್ತಿರುವ ಕಾಂಪನೆಂಟ್‌ಗಳನ್ನು ಈಗ ಭಾರತದಲ್ಲಿ ತಯಾರಿಸಲಾಗುವುದು. ಕಂಪನಿಯು ಜಂಟಿ ಉದ್ಯಮವನ್ನು ಸ್ಥಾಪಿಸುತ್ತಿದ್ದು, ಇದರಲ್ಲಿ ತೈವಾನೀಸ್ ಎಲೆಕ್ಟ್ರಾನಿಕ್ಸ್ ಪವರ್‌ಹೌಸ್ ಫಾಕ್ಸ್‌ಕಾನ್ 38 ಪ್ರತಿಶತ ಪಾಲನ್ನು ಹೊಂದಿರುತ್ತದೆ ಎಂದು ವಿವರಿಸಿದ್ದಾರೆ.

ಗುಜರಾತ್‌ನಲ್ಲಿನ ಉತ್ಪಾದನಾ ಸೌಲಭ್ಯವು ಎರಡು ವರ್ಷಗಳ ನಂತರ ಸೆಮಿಕಂಡಕ್ಟರ್‌ಗಳನ್ನು ಮಾರುಕಟ್ಟೆಗೆ ತರಲು ಪ್ರಾರಂಭಿಸುತ್ತದೆ. ಕಂಪನಿಯು ವ್ಯವಹಾರದಿಂದ 3.5 ಶತಕೋಟಿ ಡಾಲರ್ ವಹಿವಾಟಿನ ನಿರೀಕ್ಷೆಯನ್ನು ಹೊಂದಿದೆ. ಅದರಲ್ಲಿ 1ಬಿಲಿಯನ್ ಡಾಲರ್ ರಫ್ತು ಆಗಲಿದೆ ಎಂದು ಕೂಡಾ ಹೇಳಿದ್ದಾರೆ

ಭಾರತವು ಪ್ರಸ್ತುತ ಶೇಕಡ 100ರಷ್ಟು ಸೆಮಿಕಂಡಕ್ಟರ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. 2020ರಲ್ಲಿ ಎಲೆಕ್ಟ್ರಾನಿಕ್ಸ್ ಸಂಗ್ರಹಿಸಲು 15 ಶತಕೋಟಿ ಡಾಲರ್ ಖರ್ಚನ್ನು ಮಾಡಿದೆ. ಅದರಲ್ಲಿ 37 ಪ್ರತಿಶತ ಚೀನಾದಿಂದ ಬಂದಿದೆ. ಭಾರತವು ಚೀನಾದ ರಫ್ತಿನ ಮೇಲಿನ ಅವಲಂಬನೆಯನ್ನು ಶೇಕಡಾ 20 ರಷ್ಟು ಕಡಿತಗೊಳಿಸಿದರೂ, ಅದು ನಮ್ಮ ಜಿಡಿಪಿಗೆ 8 ಬಿಲಿಯನ್ ಡಾಲರ್‌ಗಳ ಕೊಡುಗೆ ನೀಡುತ್ತದೆ ಎಂದು ವರದಿಯು ಉಲ್ಲೇಖ ಮಾಡಿದೆ.

ಭಾರತದಲ್ಲಿ ವೇದಾಂತದಂತಹ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಸಂಸ್ಥೆಗಳು ರೂ 76000 ಕೋಟಿ ಮೌಲ್ಯದ ಸರ್ಕಾರದ ಯೋಜನೆಯಿಂದ ಬೆಂಬಲಿತವಾಗಿದೆ. ವೆಚ್ಚದ ಶೇಕಡ 50ರವರೆಗೆ ಹಣಕಾಸು ಸಹಾಯ ಒದಗಿಸುವ ಯೋಜನೆ ಇದಾಗಿದೆ. ತನ್ನದೇ ಆದ ಮೈಕ್ರೋಚಿಪ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವು, ತಂತ್ರಜ್ಞಾನದ ಪ್ರಾಬಲ್ಯವಿರುವ ಭವಿಷ್ಯವನ್ನು ನಿರ್ಮಾಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

Edited By : Abhishek Kamoji
PublicNext

PublicNext

14/09/2022 10:03 pm

Cinque Terre

39.85 K

Cinque Terre

10

ಸಂಬಂಧಿತ ಸುದ್ದಿ