ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಹಿತಿ ಸೋರಿಕೆ ಆರೋಪ: ವಾಟ್ಸ್ಆ್ಯಪ್ ಸ್ಪಷ್ಟನೆ ಹೀಗಿದೆ

ನವದೆಹಲಿ : ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಡೆಸಿದ್ದ ಖಾಸಗಿ ಸಂದೇಶಗಳನ್ನು ಸರ್ಚ್ ಇಂಜಿನ್​ಗಳಲ್ಲಿ ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ನಡುವೆ ಫೇಸ್​ಬುಕ್​ ಒಡೆತನದ ಮೆಸೇಜಿಂಗ್ ಸೇವೆ ಆ್ಯಪ್​ ಮತ್ತೊಂದು ಸ್ಪಷ್ಟೀಕರಣ ನೀಡಿದೆ.

ವಾಟ್ಸ್ಆ್ಯಪ್ ಇತ್ತೀಚೆಗೆ ಪರಿಷ್ಕೃತ ಪಾಲಿಸಿಯ ಬದಲಾವಣೆಯು ಸ್ನೇಹಿತರು ಅಥವಾ ಕುಟುಂಬದೊಂದಿಗೆ ನಡೆಸಿದ್ದ ಸಂದೇಶಗಳ ಗೌಪ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬದಲಾಗಿ, ಈ ಅಪ್‌ಡೇಟ್‌ನಲ್ಲಿ ವಾಟ್ಸ್ಆ್ಯಪ್‌ನಲ್ಲಿ ವ್ಯವಹಾರ ಸಂದೇಶ ಕಳುಹಿಸುವಲ್ಲಿ ಬದಲಾವಣೆ ಒಳಗೊಂಡಿದೆ ಎಂದು ಹೇಳಿದೆ.

ಟ್ವಿಟರ್​ನಲ್ಲಿ ವಾಟ್ಸ್ಆ್ಯಪ್​ ಹಂಚಿಕೊಂಡ ಸ್ಪಷ್ಟನೆ

ವಾಟ್ಸ್ಆ್ಯಪ್ ಆಗಲಿ ಅಥವಾ ಫೇಸ್​ಬುಕ್ ಆಗಲಿ ನಿಮ್ಮ ಖಾಸಗಿ ಸಂದೇಶ ಅಥವಾ ಕರೆಗಳನ್ನು ಕೇಳಲು, ನೋಡಲು ಸಾಧ್ಯವಿಲ್ಲ.

ಪ್ರತಿಯೊಬ್ಬರೂ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ವಾಟ್ಸ್ಆ್ಯಪ್ ತನ್ನ ಬಳಿ ಇರಿಸಿಕೊಳ್ಳುತ್ತದೆ.

ನೀವು ಹಂಚಿಕೊಂಡ ಸ್ಥಳವನ್ನು ನೋಡಲು ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ಗೂ ಸಾಧ್ಯವಿಲ್ಲ.

ವಾಟ್ಸ್ಆ್ಯಪ್ ನಿಮ್ಮ ಸಂಪರ್ಕಗಳನ್ನು ಫೇಸ್‌ಬುಕ್‌ ಜತೆಗೆ ಹಂಚಿಕೊಳ್ಳುವುದಿಲ್ಲ.

ವಾಟ್ಸ್ಆ್ಯಪ್ ಗ್ರೂಪ್​ಗಳು ಖಾಸಗಿಯಾಗಿ ಇರಲಿವೆ.

ನಿಮ್ಮ ಸಂದೇಶಗಳು ಕಣ್ಮರೆಯಾಗುವಂತೆ ನೀವು ಹೊಂದಿಕೆ ಮಾಡಿಕೊಳ್ಳಬಹುದು.

ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದು.

ನಾವು ಈ ಡೇಟಾವನ್ನು ಫೇಸ್‌ಬುಕ್‌ನೊಂದಿಗೆ ಜಾಹೀರಾತುಗಳಿಗಾಗಿ ಹಂಚಿಕೊಳ್ಳುವುದಿಲ್ಲ. ಖಾಸಗಿ ಚಾಟ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಹೀಗಾಗಿ, ಸೇವಾ ಪೂರೈಕೆದಾರರು ಬಳಕೆದಾರರ ಯಾವುದೇ ಸಂಗತಿಗಳನ್ನು ನೋಡುವುದಿಲ್ಲ ಎಂದು ವಾಟ್ಸ್ ಆ್ಯಪ್ ಸ್ಪಷ್ಟನೆ ನೀಡಿದೆ.

Edited By : Nagaraj Tulugeri
PublicNext

PublicNext

14/01/2021 08:29 am

Cinque Terre

70.69 K

Cinque Terre

2