", "articleSection": "Business,Science and Technology", "image": { "@type": "ImageObject", "url": "https://prod.cdn.publicnext.com/s3fs-public/387839-1738065169-Untitled-design---2025-01-28T171906.303.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚೀನಾದ ಪುಟಾಣಿ ಸ್ಟಾರ್ಟಪ್‌ ಡೀಪ್‌ಸೀಕ್‌ ಬಿಡುಗಡೆ ಮಾಡಿದ ಎಐ ಟೂಲ್‌ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಇದರ ಹೊಡೆತಕ್ಕೆ ಅಮೆರಿಕದ ದೈತ್ಯ ...Read more" } ", "keywords": "DeepSea, China, US Stock Market, VenFeng, Artificial Intelligence, Tech News, Global Markets, Financial News, Chinese Tech Companies.,,Business,Science-and-Technology", "url": "https://publicnext.com/article/nid/Business/Science-and-Technology" } ಚೀನಾದ ಹೊಸ AI ಎಂಟ್ರಿ, ಅಮೆರಿಕಾ ಷೇರು ಮಾರುಕಟ್ಟೆ ಥಂಡಾ! - ದೊಡ್ಡಣ್ಣನಿಗೆ ಠಕ್ಕರ್ ಕೊಟ್ಟ ವೆನ್‌ಫೆಂಗ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೀನಾದ ಹೊಸ AI ಎಂಟ್ರಿ, ಅಮೆರಿಕಾ ಷೇರು ಮಾರುಕಟ್ಟೆ ಥಂಡಾ! - ದೊಡ್ಡಣ್ಣನಿಗೆ ಠಕ್ಕರ್ ಕೊಟ್ಟ ವೆನ್‌ಫೆಂಗ್

ಚೀನಾದ ಪುಟಾಣಿ ಸ್ಟಾರ್ಟಪ್‌ 'ಡೀಪ್‌ಸೀಕ್‌' ಬಿಡುಗಡೆ ಮಾಡಿದ ಎಐ ಟೂಲ್‌ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಇದರ ಹೊಡೆತಕ್ಕೆ ಅಮೆರಿಕದ ದೈತ್ಯ ಟೆಕ್‌ ಕಂಪನಿಗಳೆಲ್ಲ ಥಂಡಾ ಹೊಡೆದಿವೆ.

ಚೀನಾದ (ಎಐ) ಸ್ಟಾರ್ಟ್‌ಅಪ್ ಡೀಪ್‌ಸೀಕ್‌ ತನ್ನ ಹೊಸ ಆರ್‌1 ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದಾದ ಬೆನ್ನಲ್ಲೇ ಅಮೆರಿಕದ ಷೇರುಪೇಟೆ ವಾಲ್ ಸ್ಟ್ರೀಟ್‌ನಲ್ಲಿ ಅಕ್ಷರಶಃ ಅಲ್ಲೋಲ ಕಲ್ಲೋಲ ಉಂಟಾಗಿದೆ.

ಕೇವಲ 1 ವರ್ಷ ಹಿಂದೆ ಆರಂಭವಾದ ಈ ಸ್ಟಾರ್ಟಪ್‌ ಈಗ ಬೃಹತ್‌ ಕಂಪನಿಗಳಿಗೇ ಸವಾಲೊಡ್ಡಿ ನಿಂತಿದೆ. ಅದರಲ್ಲೂ ಎಐ ಬೂಮ್‌ನಿಂದ ಭಾರೀ ಏರಿಕೆ ಕಂಡಿದ್ದ ಚಿಪ್‌ ಕಂಪನಿ ಎನ್‌ವಿಡಿಯಾ ಷೇರುಗಳು ಶೇ. 17ರಷ್ಟು ಕುಸಿತ ಕಂಡು 118.58 ಡಾಲರ್‌ಗೆ ತಲುಪಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ಭಾರಿ ಆತಂಕಕ್ಕೊಳಗಾಗಿದ್ದಾರೆ.

DeepSeek ಹಿಂದಿರುವ ಚೀನಾದ ಉದ್ಯಮಿ ಲಿಯಾಂಗ್ ವೆನ್‌ಫೆಂಗ್..!

ಲಿಯಾಂಗ್ ವೆನ್‌ಫೆಂಗ್ ಅವರು ಚೀನಾದ ಒಬ್ಬ ಯುವ ಮತ್ತು ಡೈನಾಮಿಕ್ ವ್ಯಾಪಾರೋದ್ಯಮಿ. ಅವರು ಹಣಕಾಸಿನ ವಿಚಾರದಲ್ಲಿ ತುಂಬಾ ಚುರುಕುಬುದ್ಧಿಯವರು. 40 ವರ್ಷದ ಲಿಯಾಂಗ್ ಝಿಜಿಯಾಂಗ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದ ನಂತರ ಪರಿಮಾಣಾತ್ಮಕ ಹೆಡ್ಜ್ ಫಂಡ್, ಹೈ-ಫ್ಲೈಯರ್ ಅನ್ನು ಸಹ-ಸ್ಥಾಪಿಸಿದರು.

ಸೂಚ್ಯಂಕವೂ ಕುಸಿತ :

ಡೀಪ್‌ಸೀಕ್‌ನ ಪರಿಣಾಮ ಎಸ್‌&ಪಿ 500 ಶೇ. 1.5ರಷ್ಟು ಕುಸಿತ ಕಂಡಿತು. ಇದು ಕಳೆದ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಲ್ಲಿನ ಅತ್ಯಂತ ದೊಡ್ಡ ನಷ್ಟವಾಗಿದೆ. ಮೈಕ್ರೋಸಾಫ್ಟ್ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳ ಷೇರುಗಳು ತೀವ್ರ ಕುಸಿತ ಕಂಡವು. ಹೂಡಿಕೆದಾರರು ಸುರಕ್ಷಿತ ಆಸ್ತಿಗಳತ್ತ ಗಮನ ಹರಿಸುತ್ತಿದ್ದಂತೆ ಬಾಂಡ್ ಇಳುವರಿಗಳೂ ಇಳಿಕೆ ಕಂಡಿವೆ.

ನಾಸ್ಡಾಕ್‌ ಕಾಂಪೊಸಿಟ್‌ ಶೇ. 3.1ರಷ್ಟು ಕುಸಿತ ಕಂಡಿತು. ಎನ್‌ವಿಡಿಯಾ ಸೇರಿ ದೈತ್ಯ ಟೆಕ್‌ ಕಂಪನಿಗಳ ಷೇರುಗಳಲ್ಲಿನ ತೀವ್ರ ನಷ್ಟದಿಂದಾಗಿ ಇದು ಸಂಭವಿಸಿದೆ. ಎಐ ಡೇಟಾ ಸೆಂಟರ್‌ಗಳಿಗೆ ಸಂಬಂಧಿಸಿದ ಕಂಪನಿಗಳ ಷೇರುಗಳೂ ಕುಸಿತ ಕಂಡಿವೆ.

Edited By : Abhishek Kamoji
PublicNext

PublicNext

28/01/2025 05:24 pm

Cinque Terre

172.3 K

Cinque Terre

0