ಬೆಳಗಾವಿ: ಪುರುಷರು ದುಡಿದಷ್ಟೇ ಮಹಿಳೆಯರ ದುಡಿಮೆಯ ಪ್ರಯೋಜನ ಈ ದೇಶಕ್ಕೆ ಸಿಗುವಂತಾಗಬೇಕು. ಅದು ದೇಶದ ಅಭಿವೃದ್ಧಿಗೆ ಪೂರಕ. ಆದ್ರೆ ಆಧುನಿಕತೆ ಎಷ್ಟೇ ಬೆಳೆದರೂ ಮಹಿಳೆಗೆ ದುಡಿಯುವ ಸ್ವಾತಂತ್ರ್ಯವನ್ನು ಈ ಸಮಾಜ ಕೊಡುತ್ತಿಲ್ಲ. ಆದ್ರೂ ನೂರೆಂಟು ಸಂಕೋಲೆಗಳನ್ನು ಮೆಟ್ಟಿ ನಿಂತ ಅನೇಕ ಮಹಿಳೆಯರು ಗೃಹ ಕೈಗಾರಿಕೆಗಳಲ್ಲಿ, ಸಣ್ಣ ಉದ್ದಿಮೆಗಳಲ್ಲಿ ದುಡಿಯುತ್ತಿದ್ದಾರೆ. ಹೀಗೆ ಕೌದಿ ಹೊಲಿಯುತ್ತ ಸಣ್ಣ ಉದ್ಯಮ ಆರಂಭಿಸಿದ ಶಾರವ್ವ ಶಿವಪುತ್ರ ಧಾರೋಜಿ ಅವರು ಇಂದು ಹತ್ತು ಮಂದಿಗೆ ಕೆಲಸ ಕೊಡುವಷ್ಟು ಬೆಳೆದಿದ್ದಾರೆ.
ಶ್ರಮ ಜೀವಿ ಸಂಜೀವಿನಿ ವನ ಧನ ವಿಕಾಸ ಕೇಂದ್ರ ಎಂಬ ಸಣ್ಣ ಉದ್ಯಮದ ಒಡತಿ ಆಗಿರುವ ಶಾರವ್ವ ಅವರ ಕೌದಿ ಹಾಗೂ ಇತರ ಉತ್ಪನ್ನಗಳಿಗೆ ಅಮೆರಿಕದಿಂದಲೂ ಬೇಡಿಕೆ ಬಂದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಚಿಕಾಲಗುಡ್ಡದ ಯಶಸ್ವಿ ಉದ್ಯಮಿ ಶಾರವ್ವ ಅವರು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬನ್ನಿ ಅವರು ಸವೆಸಿದ ಹಾದಿ ಹೇಗಿತ್ತು ಎಂಬ ಬಗ್ಗೆ ನೋಡೋಣ..ಕೇಳೋಣ.
ದೇಶಪಾಂಡೆ ಫೌಂಡೇಶನ್ ಸಣ್ಣ ಉದ್ದಿಮೆಗಳ
ಮಾಹಿತಿಗಾಗಿ ಸಂಪರ್ಕಿಸಿ +91 77609 65490
PublicNext
25/05/2022 03:10 pm