ತಿರುವನಂತಪುರಂ: ಲಕ್ ಅಂದ್ರೆ ಇದು. ಕೆಲವೊಮ್ಮೆ ಶ್ರೀಮಂತ ಬೀದಿಗೆ ಬಂದಿದ್ದನ್ನು ನೋಡಿದ್ದೇವೆ. ಭಿಕ್ಷುಕ ಅರಮನೆ ಕಟ್ಟಿದ್ದನ್ನೂ ನೋಡಿದ್ದೇವೆ. ಆದ್ರೆ ಇದು ಬೇರೇನೇ ಕತೆ.
ಕೇರಳದ ಕೋಳಿಕ್ಕೋಡ್‌ನಲ್ಲಿ ಅವರಿವರು ಕರೆದಾಗ ಕೂಲಿ ಕೆಲಸಕ್ಕೆ ಹೋಗುತ್ತ ಅಷ್ಟರಲ್ಲೇ ಬದುಕು ಸಾಗಿಸುತ್ತಿದ್ದ ವ್ಯಕ್ತಿ ಇಂದು ಫೇಮಸ್ ಮಾಡೆಲ್ ಆಗಿದ್ದಾನೆ.
ಅಂದ್ ಹಾಗೆ ಇವರ ಹೆಸರು ಮಮ್ಮಿಕ್ಕಾ. ಮಾಸಲು ಅಂಗಿ, ಕೊಳೆ ತುಂಬಿದ ಗಡ್ಡ, ಹರಿದ ಪಂಚೆ ಸುತ್ತಿಕೊಂಡು ತಿರುಗಾಡುತ್ತಿದ್ದ ಮಮ್ಮಿಕ್ಕಾ ಒಂದು ದಿನ ಸ್ಥಳೀಯ ಫೋಟೋಗ್ರಾಫರ್ ಶರೀಕ್ ಅವರ ಕಣ್ಣಿಗೆ ಬಿದ್ದಿದ್ದಾರೆ. 60ರ ಪ್ರಾಯದ ಮಮ್ಮಿಕ್ಕಾ ಅವರ ಮುಖದಲ್ಲಿ ಅದೆಂತದ್ದೋ ಲಕ್ಷಣ ಕಂಡ ಅವರು ಸೀದಾ ಸ್ಟುಡಿಯೋಗೆ ಕರೆತಂದು ವಿಭಿನ್ನ ಲುಕ್‌ನಲ್ಲಿ ಒಂದೆರಡು ಫೋಟೋ ಕ್ಲಿಕ್ಕಿಸಿದ್ದಾರೆ. ಅಲ್ಲಿಂದ ಶುರುವಾಯ್ತು ನೋಡಿ ಮಮ್ಮಿಕ್ಕಾ ಹವಾ...
ಇದೀಗ ಸ್ಥಳೀಯ ಕಂಪನಿಯೊಂದರ ಮಾಡೆಲ್ ಆಗಿ ಮಮ್ಮಿಕ್ಕಾ ನೇಮಕವಾಗಿದ್ದಾರೆ. ದುಬಾರಿ ಸೂಟುಬೂಟು, ಸನ್‌ಗ್ಲಾಸ್ ಧರಿಸಿ ಮಿರಿಮಿರಿ ಮಿಂಚುತ್ತಿರುವ ಮಮ್ಮಿಕ್ಕಾ ಈಗ ಬೇಡಿಕೆಯ ಮಾಡೆಲ್ ಆಗಿದ್ದಾರೆ.
PublicNext
16/02/2022 10:54 am