ಮುಂಬೈ : ಶ್ರೀಮಂತರೆಲ್ಲರೂ ದಾನ ಮಾಡಲ್ಲಾ ಆದ್ರೆ ಕೆಲವರು ದಾನ ಮಾಡಿದ್ರು ಗೊತ್ತಾಗಲ್ಲಾ ಹಾಗೆ ದಾನ ಮಾಡಿಯೂ ಮಾಡದಂತ್ತಿರುತ್ತಾರೆ.
ಸದ್ಯ ಅಜೀಂ ಪ್ರೇಮ್ ಜಿ ಈ ವರ್ಷ ನೀಡಿದ ದಾನದ ಮೊತ್ತ ಕೇಳಿದ್ರೆ ನೀವು ದಂಗಾಗತ್ತಿರಾ..
ಹೌದು 2020 ನೇ ಹಣಕಾಸು ವರ್ಷದಲ್ಲಿ ಒಟ್ಟು 7,804 ಕೋಟಿ ರು.ಗಳನ್ನು ಸಮಾಜ ಸೇವೆಗೆ ನೀಡುವ ಮೂಲಕ ದೇಶದ ನಂ.1 ದಾನಿಯಾಗಿ ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹೊರಹೊಮ್ಮಿದ್ದಾರೆ.
ಈ ವರ್ಷ ಇವರು ದಿನಕ್ಕೆ ಸರಾಸರಿ 22 ಕೋಟಿ ರು. ಮಾಡಿದ್ದಾರೆ.
ಕಳೆದ ವರ್ಷ ಎಚ್ ಸಿಎಲ್ ಕಂಪನಿಯ ಶಿವ ನಾಡಾರ್ 826 ಕೋಟಿ ರು. ದಾನ ಮಾಡುವ ಮೂಲಕ ಅತಿದೊಡ್ಡ ದಾನಿಯಾಗಿದ್ದರು.
ಈ ವರ್ಷ ಅವರು 795 ಕೋಟಿ ರು. ದಾನ ಮಾಡಿದ್ದಾರೆ.
ಕಳೆದ ವರ್ಷ 426 ಕೋಟಿ ರು. ನೀಡಿದ್ದ ಅಜೀಂ ಪ್ರೇಮ್ ಜಿ ಈ ವರ್ಷ ಅದನ್ನು ಭಾರಿ ಪ್ರಮಾಣದಲ್ಲಿ ಏರಿಸಿ ನಂ.1 ದಾನಿಯಾಗಿದ್ದಾರೆ.
ಶಿವ ನಾಡಾರ್ 2ನೇ ಅತಿ ದೊಡ್ಡ ದಾನಿಯಾಗಿದ್ದಾರೆ.
ದೇಶದ ನಂ.1 ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ 458 ಕೋಟಿ ರು. ನೀಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
PublicNext
11/11/2020 05:42 pm