ನವದೆಹಲಿ: ದೇಶದ ಸಾಮಾನ್ಯ ಜನರಿಗೆ ನಿರಂತರವಾಗಿ ಬೆಲೆ ಏರಿಕೆ ಬಿಸಿ ತಾಗುತ್ತಲೇ ಇದೆ. ಇಂದು ಭಾನುವಾರ ಮತ್ತೆ ಬೆಲೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 35 ಪೈಸೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 30 ಪೈಸೆ ಗಳಷ್ಟು ಹೆಚ್ಚಿಸಲಾಗಿದೆ. ಇದು 104.14 ರೂ.ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 92.82ರೂ.ಗೆ ಏರಿದೆ. ಬೆಲೆ 0.35ರೂ. ಏರಿಕೆಯಾಗಿದೆ. ಇನ್ನು ರಾಜ್ಯದ ಹಾವೇರಿಯಲ್ಲಿ ಡೀಸೆಲ್ ದರ ನೂರು ರೂ. ಸನಿಹದಲ್ಲಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ.110.12 (ರೆ.0.29 ರಷ್ಟು ಏರಿಕೆ) ಮತ್ತು ಡೀಸೆಲ್ ಬೆಲೆ ಇಂದು ಪ್ರತಿ ಲೀಟರ್ ಗೆ ರೂ.100.66 (ರೀ 0.37 ರಷ್ಟು ಏರಿಕೆ) ಆಗಿದೆ.
PublicNext
10/10/2021 11:18 am