ಅಹಮದಾಬಾದ್: ದೀಪಾವಳಿ ಸಂದರ್ಭದಲ್ಲಿ ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಒಂದಿಲ್ಲೊಂದು ಉಡುಗೊರೆಗಳನ್ನು ನೀಡುವುದು ವಾಡಿಕೆ.ಅದೇ ರೀತಿ ಇಲ್ಲೊಂದು ಅಹಮದಾಬಾದ್ ನ ಕಂಪನಿಯೊಂದು ದುಬಾರಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೇ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ನೀಡಿದೆ.
ಹೌದು ಅಲಯನ್ಸ್ ಗ್ರೂಪ್ ಎಂಬ ಎಂಬ್ರಾಯಿಡರಿ ಮೆಷೀನ್ ಗಳನ್ನು ತಯಾರಿಸುವ ಕಂಪನಿಯು ತನ್ನ ಉದ್ಯೋಗಿಗಳಿಗೆ ದೀಪಾವಳಿಯ ಉಡುಗೊರೆಯಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ನೀಡಿದೆ. ಒಕಿನಾವಾ ಪ್ರೈಸ್ ಪ್ರೊ ಹೆಸರಿನ ಸುಮಾರು 76,848 ರೂ. ಶೋರೂಂ ದರ ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್ ನ್ನು ಸಂಸ್ಥೆಯು ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿದೆ.
“ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಇತರ ಅಂಶಗಳ ದೃಷ್ಟಿಯಿಂದ ನಾವು ನಮ್ಮ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆವು,” ಎಂದು ಅಲಯನ್ಸ್ ಗ್ರೂಪ್ ಕಂಪನಿಯ ನಿರ್ದೇಶಕ ಸುಭಾಷ್ ದವಾರ್ ಹೇಳಿದ್ದಾರೆ.
ಸುಮಾರು 35 ಉದ್ಯೋಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ನ್ನು ದೀಪಾವಳಿಯ ಗಿಫ್ಟ್ ನೀಡಿ ಉದ್ಯೋಗಿಗಳ ಖುಷಿ ಹೆಚ್ಚಿಸಿದ್ದಾರೆ.
PublicNext
06/11/2021 03:58 pm