", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/52563-1738063691-1b8e77d0-eef7-43e5-82bc-7a48b443aa08.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಾರತದ ಅತೀ ದೊಡ್ಡ ಐಟಿ ಕಂಪನಿಗಳಾದ ಟಿಸಿಎಸ್​​, ಇನ್ಫೋಸಿಸ್​​​, HCLtech, ವಿಪ್ರೋ, ಟೆಕ್​​ ಮಹೀಂದ್ರಾದಲ್ಲೇ ಉದ್ಯೋಗಿಗಳ ಲೇ ಆಫ್​ ನಡೆದಿದೆ. ...Read more" } ", "keywords": "IT company, job loss, sudden termination, layoffs, tech industry, employment news, job market, IT sector, job security, career updates, tech news, industry trends, job cuts, employment trends, corporate news, business updates, IT jobs, tech jobs, job loss news, layoffs news, job market news, IT sector news, job security news, career news, tech updates, industry updates, job cuts news, employment updates, corporate updates, business news.,,Business", "url": "https://publicnext.com/article/nid/Business" } TECH​​​​​ ಕಂಪನಿಗಳಿಂದ IT ಉದ್ಯೋಗಿಗಳಿಗೆ ಶಾಕ್ : ಕೆಲಸದಿಂದ ದಿಢೀರ್ ವಜಾ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

TECH​​​​​ ಕಂಪನಿಗಳಿಂದ IT ಉದ್ಯೋಗಿಗಳಿಗೆ ಶಾಕ್ : ಕೆಲಸದಿಂದ ದಿಢೀರ್ ವಜಾ

ಭಾರತದ ಅತೀ ದೊಡ್ಡ ಐಟಿ ಕಂಪನಿಗಳಾದ ಟಿಸಿಎಸ್​​, ಇನ್ಫೋಸಿಸ್​​​, HCLtech, ವಿಪ್ರೋ, ಟೆಕ್​​ ಮಹೀಂದ್ರಾದಲ್ಲೇ ಉದ್ಯೋಗಿಗಳ ಲೇ ಆಫ್​ ನಡೆದಿದೆ. 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬರೋಬ್ಬರಿ 2,587 ಮಂದಿ ಐಟಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ.

ಟಿಸಿಎಸ್ ಈಗಾಗಲೇ 5,370 ಉದ್ಯೋಗಿಗಳನ್ನು ತೆಗೆದು ಹಾಕಿದೆ. ಟೆಕ್ ಮಹೀಂದ್ರಾ ಕೂಡ 3,785 ಮಂದಿಗೆ ಕೊಕ್​ ನೀಡಿದೆ.

ಇನ್ನೊಂದೆಡೆ ಇನ್ಫೋಸಿಸ್ ಮತ್ತು ಹೆಚ್‌ಸಿಎಲ್‌ ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡಿವೆ. ಇನ್ಫೋಸಿಸ್ ಈ ತ್ರೈಮಾಸಿಕದಲ್ಲಿ 5,591 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. 2026ರ ಹಣಕಾಸು ವರ್ಷದಲ್ಲಿ 20,000 ಹೊಸ ಉದ್ಯೋಗಿಗಳನ್ನು ನೇಮಕ ಮಾಡುವ ಪ್ಲ್ಯಾನ್​ ಮಾಡಿಕೊಂಡಿದೆ. ಹೆಚ್‌ಸಿಎಲ್‌ ಟೆಕ್‌ ನೇಮಕಾತಿ ಸಂಖ್ಯೆಯನ್ನು 7,000ಕ್ಕೆ ಮಿತಿಗೊಳಿಸಿದೆ. ಮುಂದಿನ ದಿನಗಳ ಈ ಐದು ಕಂಪನಿಗಳು ಬರೋಬ್ಬರಿ 15,033 ಮಂದಿ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಕಾರಣ ಫ್ರೆಶರ್ಸ್​​. ಕಡಿಮೆ ಸಂಬಳದಲ್ಲಿ ಹೊಸಬರ ಕೈಯಲ್ಲೇ ಕೆಲಸ ಮಾಡಿಸಬಹುದು ಎನ್ನುವುದು ಐಟಿ ಕಂಪನಿಗಳ ಪ್ಲ್ಯಾನ್​​. ಹಾಗಾಗಿ ಅನುಭವಿಗಳನ್ನು ವಜಾ ಮಾಡಿ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

Edited By : Nirmala Aralikatti
PublicNext

PublicNext

28/01/2025 04:59 pm

Cinque Terre

18.08 K

Cinque Terre

1