ಬೀದರ್: ಕೆರೆಯಲ್ಲಿ ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ಸೋಮವಾರ ಬೀದರ್ ತಾಲೂಕಿನ ಕಂಗಟಿ ಗ್ರಾಮದಲ್ಲಿ ನಡೆದಿದೆ.
ದಸರಾ ಹಬ್ಬದ ನಿಮಿತ್ಯ ಬಟ್ಟೆ ಒಗೆಯಲು ಕೆರೆಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ನೀರು ಪಾಲಾಗಿದ್ದಾರೆ. ಸುನೀತಾ(32), ಪುತ್ರ ನಾಗಶೆಟ್ಟಿ(12), ಆನಂದಾ(33), ಪ್ರಜ್ವಲ್(14) ನೀರು ಪಾಲಾದವರು ಎಂದು ಹೇಳಲಾಗಿದೆ.
ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಮೂವರ ಶವ ದೊರೆತಿದ್ದು, ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಾಗಶೆಟ್ಟಿ ಮಂಜುಕುಮಾರ ಪರೀಟ (10) ಅವರಿಗಾಗಿ ಹುಡುಕಾಟ ನಡೆದಿದೆ.
ಜನವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಳುಗು ತಜ್ಞರನ್ನು ಕರೆಸಿ ಶವಗಳ ಶೋಧ ಕಾರ್ಯ ನಡೆಸಿದರು ಮೂವರ ಶವ ಸಂಜೆ ಪತ್ತೆಯಾಗಿದೆ.
ತಡ ರಾತ್ರಿವರೆಗೂ ಬಾಲಕ ಪತ್ತೆಯಾಗಿಲ್ಲ. ನವರಾತ್ರಿ ಸಂದರ್ಭದಲ್ಲಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.
ವರದಿ :ಯೋಹನ್ ಪಿ ಹೊನ್ನಡ್ಡಿ
PublicNext
27/09/2022 10:40 pm