ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಡೂರು: ಬಡವರ ಪಾಲಿನ ಪಾಂಡುರಂಗ ಮುಖ್ಯಮಂತ್ರಿ ಸಿದ್ದರಾಮಯ್ಯ - ಸಂತೋಷ್ ಲಾಡ್

ಸಂಡೂರು: ಬಡವರ ಪಾಲಿನ ಪಾಂಡುರಂಗ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವತ್ತು ಇಂದಿರಾಗಾಂಧಿ- ಇವತ್ತು ಸಿದ್ದರಾಮಯ್ಯ ಅವರು ಕೊಟ್ಟ ಕಾರ್ಯಕ್ರಮಗಳನ್ನು ಬಿಟ್ಟರೆ ಬಿಜೆಪಿಯ ಯಾವ ಕಾರ್ಯಕ್ರಮ ರಾಜ್ಯದಲ್ಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಸಂಡೂರಿನ ವಿಧಾನಸಭಾ ಉಪಚುನಾವಣೆಯಲ್ಲಿ ಮಾತನಾಡಿದ ಅವರು, TB ಡ್ಯಾಂನಿಂದ ಸಂಡೂರಿನ 136 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಿದ ಭಗೀರಥ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ. ಜನಾರ್ದನರೆಡ್ಡಿಯವರೇ ನಿಮಗೆ ದೇವರು ನಾಲಿಗೆ ಕೊಟ್ಟಿದ್ದಾನೆ ಅಂತ ಸಿದ್ದರಾಮಯ್ಯ ಅವರ ವಯಸ್ಸಿಗೆ, ಘನತೆಗೂ, ಚರಿತ್ರೆಗೂ ಬೆಲೆ ಕೊಡದೆ ವೈಯುಕ್ತಿಕವಾಗಿ ಏಕವಚನದಲ್ಲಿ ಮಾತನಾಡಬೇಡಿ. ಯಡಿಯೂರಪ್ಪ ಅವರಿಗೂ ಹೀಗೇ ಏಕ ವಚನದಲ್ಲಿ ಮಾತನಾಡಿದ್ರಿ. ಇದರಿಂದ ನಿಮಗೆ ಖುಷಿ ಸಿಗಬಹುದು. ಆದರೆ ಒಳ್ಳೇದಾಗಲ್ಲ ಎಂದರು.

ಇಂಥಾ ಜನಾರ್ದನರೆಡ್ಡಿಗೆ ಸರಿಯಾದ ಪಾಠ ಕಲಿಸಿ ಕಾಂಗ್ರೆಸ್ಸಿನ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಎಂದು ಸಚಿವ ಸಂತೋಷ್ ಲಾಡ್ ಮನವಿ ಮಾಡಿದರು.

Edited By : Manjunath H D
PublicNext

PublicNext

09/11/2024 06:36 pm

Cinque Terre

32.79 K

Cinque Terre

4