ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಖಾನಾಪೂರದಲ್ಲಿ ಇಂದಿನಿದ ಸಣ್ಣ ಉದ್ಯಮಿ ಸಂತೆ

ಖಾನಾಪೂರ: ಖಾನಾಪೂರ ತಾಲ್ಲೂಕಿನ ಸಣ್ಣ ಉದ್ಯಮಿದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶಪಾಂಡೆ ಪ್ರತಿಷ್ಠಾನದ ಸಣ್ಣ ಉದ್ಯಮಿದಾರರ ಅಭಿವೃದ್ಧಿ ಕಾರ್ಯಕ್ರಮದಡಿ ಇಂದಿನಿಂದ 4 ದಿನಗಳ ಕಾಲ ಖಾನಾಪೂರ ಪಟ್ಟಣದಲ್ಲಿ ಸಣ್ಣ 'ಉದ್ಯಮಿ ಸಂತೆ' ಆಯೋಜಿಸಲಾಗಿದೆ.

ಖಾನಾಪೂರ ಪಟ್ಟಣದ ಬಸ್ ನಿಲ್ದಾಣ ಸಮೀಪದ ಲೋಕಮಾನ್ಯಮಂಗಲ ಕಾರ್ಯಾಲಯದಲ್ಲಿ ಪ್ರತಿದಿನ ಬೆಳಗ್ಗೆ 10:30ರಿಂದ ಇಲ್ಲಿ ವಿವಿಧ ಆಹಾರ, ಸಾವಯವ ಪದಾರ್ಥ, ಸಾವಯವ ಸಿರಿ ಧಾನ್ಯ, ವಿವಿಧ ಬಗೆ ಸಿಹಿ ಖಾದ್ಯ, ತಿಂಡಿ ತಿನಿಸುಗಳು, ಕೈ ಮಗ್ಗದ ಸೀರೆ, ಉಡುಪುಗಳು, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಸ್ಥಳೀಯ ಉದ್ದಿಮೆದಾರರು ಹಾಗೂ ಗ್ರಾಹಕರು ಉದ್ಯಮಿ ಸಂತೆ ಸುದಪಯೋಗ ಪಡೆದುಕೊಳ್ಳಬೇಕು ಎಂದು ಪ್ರೊಜೆಕ್ಟ್ ಮ್ಯಾನೇಜರ್ ವೀರಯ್ಯ ಹಿರೇಮಠ ತಿಳಿಸಿದ್ದಾರೆ.

ವರದಿ: ನಾಗೇಶ್ ನಾಯ್ಕರ

Edited By : Vijay Kumar
Kshetra Samachara

Kshetra Samachara

09/10/2022 04:10 pm

Cinque Terre

9.1 K

Cinque Terre

0