ಬೆಂಗಳೂರು: ಬೆಂಗಳೂರು ಜಲಮಂಡಳಿಯ 4ನೇ ಹಂತ 1ನೇ ಘಟ್ಟದ ವ್ಯಾಪ್ತಿಗೆ ಒಳಪಡುವ ಜೆ.ಡಿ.ಮರ ಬನ್ನೇರಘಟ್ಟ ರಸ್ತೆ ಸಮೀಪ ಹಾಲಿ ಇರುವ ಕೊಳವೆ ಮಾರ್ಗಕ್ಕೆ ಹೊಸದಾಗಿ 900 ಮಿ.ಮೀ. ಕೊಳವೆ ಜೋಡಣೆ ಕಾಮಗಾರಿ ನಡೆಯುತ್ತಿರುವುದರಿಂದ ಅ.7 ರಂದು ನಗರದ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜೆ.ಪಿ.ನಗರ 4ನೇ ಹಂತದಿಂದ 8ನೇ ಹಂತದವರೆಗೂ, ಜರಗನಹಳ್ಳಿ, ಆರ್‌ಬಿಐ.ಲೇಔಟ್, ಪಾಂಡುರಂಗ ನಗರ, ಅರಕೆರೆ, ಮೈಕೋಲೇಔಟ್, ದೊರೆಸ್ವಾಮಿ ಪಾಳ್ಯ, ಕೊತ್ತನೂರುದಿಣ್ಣೆ, ವೆಂಕಟಾದ್ರಿಲೇಔಟ್, ಚುಚ್ಚಘಟ್ಟ, ಕೋಣನಕುಂಟೆ, ಎಸ್‌ಬಿಎಂ ಲೇಔಟ್, ಸುಪ್ರೀಂ ರೆಸಿಡೆನ್ಸಿ ಲೇಔಟ್, ಲೇಕ್‌ಸಿಟಿ, ನಾದಮ್ಮ ಲೇಔಟ್, ರೋಟರಿ ನಗರ, ಎಚ್‌ಎಸ್‌ಆರ್ ಲೇಔಟ್ 1ನೇ ಸೆಕ್ಟರ್ ನಿಂದ 7ನೇ ಸೆಕ್ಟರ್ ವರೆಗೆ, ಅಗರ ವಿಲೇಜ್, ಮಂಗಮ್ಮನಪಾಳ್ಯ, ಮದೀನ ನಗರ, ಐಟಿಐ ಲೇಔಟ್, ಹೊಸಪಾಳ್ಯ,ಬಂಡೇಪಾಳ್ಯ,
4ನೇ ಟಿ ಬ್ಲಾಕ್ ಜಯನಗರ, ಬಿ.ಜಿ.ರಸ್ತೆ ಪಾರ್ಟ್ ಆರ್ 3ನೇ ಹಂತ 2ನೇ ಘಟ್ಟ, ಬಿ.ಜಿ.ರಸ್ತೆ ಈಸ್ಟ್ ರಸ್ತೆ, ಎನ್.ಎ.ಸಿ.ಲೇಔಟ್, ತಿಲಕನಗರ, ಜಯದೇವ ಆಸ್ಪತ್ರೆ, ಬಿ.ಟಿ.ಎಂ.2ನೇ ಮತ್ತು 3ನೇ ಹಂತ, ಕೆ.ಎಸ್.ಕಾಲೋನಿ, ಮಡಿವಾಳ, ತಾವರೆಕೆರೆ, ಐಕ್ಯೂಬ್ ನಗರ, ನಾರಾಯಣಪ್ಪ ಗಾರ್ಡನ್, ಡಾಲರ್ಸ್ ಕಾಲೋನಿ, ಸೋಮೇಶ್ವರ ಕಾಲೋನಿ, ವೆಂಕಟಾಪುರ, ಟೀಚರ್ಸ್ ಕಾಲೋನಿ, ಸಿದ್ದಾರ್ಥ ಕಾಲೋನಿ, ಕೋರಮಂಗಳ 4ನೇ ಇ ಬ್ಲಾಕ್ ಮತ್ತು ಜೆ ಬ್ಲಾಕ್ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
Kshetra Samachara
07/10/2022 01:20 am