ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿದ್ಯುತ್ ಚಾಲಿತ ವಾಹನ ಬಳಕೆ ಉತ್ತೇಜನಕ್ಕೆ ಇವಿ ಜಾಗೃತಿ ಪೋರ್ಟಲ್

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇವಿ –ಜಾಗೃತಿ ಪೋರ್ಟಲ್ (EV Awareness Portal) ಮತ್ತು ಬೆಂಗಳೂರು ನಗರವನ್ನು ಇವಿ ವಲಯನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿಯನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಗುರುವಾರ ಬಿಡುಗಡೆಗೊಳಿಸಿದರು.

ಇವಿ ಪೋರ್ಟಲ್ ಮತ್ತು ದಿಕ್ಸೂಚಿ ವರದಿಯನ್ನು ನೀತಿ ಆಯೋಗ, ರಾಜ್ಯ ಸರಕಾರ ಮತ್ತು ಬ್ರಿಟಿಷ್ ಸರಕಾರದ ಜಂಟಿ ಸಹಯೋಗದಲ್ಲಿ ರಚಿಸಲಾಗಿದೆ.

ಕರ್ನಾಟಕದಲ್ಲಿ ವಿದ್ಯುತ್-ಚಲನಶೀಲತೆಯ(e-mobility) ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ, ರಾಜ್ಯ ಸರ್ಕಾರವು ಕರ್ನಾಟಕ ಇವಿ -ಜಾಗೃತಿ ಪೋರ್ಟಲ್ ಜನರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಿದೆ.

ಕರ್ನಾಟಕದಲ್ಲಿ ವಿದ್ಯುತ್ ವಾಹನಗಳ ಅಂಕಿ ಅಂಶಗಳ ಮಾಹಿತಿಗಳಿಗೆ ( www.evkarnataka.co.in) ಜಾಲತಾಣವು ‘ಒನ್ ಸ್ಟಾಪ್ ಸೈಟ್ ಆಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.

ವಿದ್ಯುತ್ ಚಲನಶೀಲತೆ ಕುರಿತು ಸಾರ್ವಜನಿಕರು ನಿರ್ದಿಷ್ಟ ಮಾಹಿತಿಯನ್ನು ಪೋರ್ಟಲ್ ನಲ್ಲಿ ಪಡೆಯಬಹುದಾಗಿದೆ. ಪೋರ್ಟಲ್ ಬಳಕೆದಾರರಿಗೆ ಅನುಕೂಲವಾಗಿರುತ್ತದೆ. ಹಾಗೂ ಇವಿ ಜಾಗೃತಿ ಪೋರ್ಟಲ್ ಮುಖಾಂತರ, ರಾಜ್ಯದ ಎಲ್ಲಾ ಬಳಕೆದಾರರು ರಾಜ್ಯ ಸರ್ಕಾರದ ಇವಿ ನೀತಿ, ರಾಜ್ಯದಲ್ಲಾಗುವ ಇವಿ ಸಂಭಂದಿತ ಪ್ರಮುಖ ಬೆಳವಣಿಗೆಗಳು, ಅಸ್ತಿತ್ವದಲ್ಲಿರುವ ಇವಿ-ಸ್ಟಾರ್ಟಪ್ ಪರಿಸರ ವ್ಯವಸ್ಥೆಗಳು ಹಾಗೂ ಇಲೆಕ್ಟ್ರಿಕ್ ವಾಹನ ಬಳಕೆ ಕುರಿತು ಉಪಯುಕ್ತ ಮಾಹಿತಿಯನ್ನು ಪೋರ್ಟಲ್ನಲ್ಲಿ ಪಡೆಯಬಹುದು.

ಗ್ರಾಹಕರು, ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ, ರಾಜ್ಯ ಸರಕಾರದ ಬೆಂಬಲ ಸಹಾಯಧನ, ಚಾರ್ಜಿಂಗ್ ಸ್ಟೇಷನ್ ಮತ್ತು ಇನ್ನಿತ್ತರ ಸವಲತ್ತುಗಳ ಕುರಿತು ಮಾಹಿತಿಯನ್ನು ಇವಿ ಜಾಗೃತಿ ಪೋರ್ಟಲ್ ನೀಡಲಿದೆ.

Edited By : PublicNext Desk
Kshetra Samachara

Kshetra Samachara

09/06/2022 05:21 pm

Cinque Terre

1.96 K

Cinque Terre

0