ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಈ ಪ್ರದೇಶದಲ್ಲಿ ಇಂದು ಕರೆಂಟ್ ಕಟ್

ಬೆಂಗಳೂರು : ಕರ್ನಾಟಕ ಪವರ್ ಟ್ರಾನ್ಸ್ ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ಕಡಿತ ಉಂಟಾಗುತ್ತದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಬೆಸ್ಕಾಂ ಹೇಳಿದೆ.

ಈ ಸಮಸ್ಯೆ ಡಿಸೆಂಬರ್ 13 ರವರೆಗೆ ಇರಲಿದ್ದು,ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ನಡುವೆ ವಿದ್ಯುತ್ ಸ್ಥಗಿತಗೊಳ್ಳಲಿದೆ. ಈ ರೀತಿ ವಿದ್ಯುತ್ ಕಡಿತಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.

ಬೆಂಗಳೂರು ದಕ್ಷಿಣ ವಲಯ

ಇಂದು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಿಟ್ಲ ನಗರ, ಸಿದ್ದಾಪುರ, ಸೋಮೇಶ್ವರನಗರ, ಆರ್ಬಿಐ ಲೇಔಟ್, ಜೆಪಿ ನಗರ, ಅಯೋದ್ಯನಗರ, ವಿನಾಯಕ ನಗರ, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯರಸ್ತೆ, ಕತ್ರಿಗುಪ್ಪೆ ಪೂರ್ವ,

ಬನಶಂಕರಿ 3ನೇ ಹಂತ, ಹೊಸಕೇರಹಳ್ಳಿ, ಹೊಸಕೆರೆಹಳ್ಳಿ, ಸಿದ್ದಾಪುರ, ಮಡಿವಾಳ, ಬಿಟಿಎಂ, ಮಾರತಳ್ಳಿ, ಸಂಜಯ ನಗರ, ಮಂಜುನಾಥ ನಗರ, ಐಟಿಪಿಎಲ್ ಮುಖ್ಯರಸ್ತೆ, ಎಇಸಿಎಸ್ ಲೇಔಟ್, ಸಿಕೆ ನಗರ, ನಾರಾಯಣ ನಗರ, ದೊಡ್ಡಕಲಸಂದ್ರ, ಗೊಟ್ಟಿಗೆರೆ, ಐಡಿಬಿಐ ಲೇಔಟ್, , ಪವಮಾನ ನಗರ, ಬಿಡಿಎ ಲೇಔಟ್, ನವೋದಯ ನಗರ, ಕೆಸಿಎ ಲೇಔಟ್, ಎಚ್ಆರ್ಆರ್. ಮತ್ತು ಬಿಳೇಕಹಳ್ಳಿ.

ಬೆಂಗಳೂರು ಉತ್ತರ ವಲಯ

ಉತ್ತರ ವಲಯದಲ್ಲಿ ಬೆಳಗ್ಗೆ 10 ಗಂಟೆಯ ನಂತರ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಲಕ್ಷ್ಮೀನಾರಾಯಣಪುರ, ಸುಬ್ರಹ್ಮಣ್ಯನಗರ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಬಾಲಾಜಿ ಲೇಔಟ್ ಭದ್ರಪ್ಪ ಲೇಔಟ್, ಕೆಂಪೇಗೌಡ ನಗರ, ವಿದ್ಯಾರಣ್ಯಪುರ, ಹೆಸರಘಟ್ಟ ಪೈಪ್ಲೈನ್ ರಸ್ತೆ,

ಗುಡ್ಡದಹಳ್ಳಿ, ಬಸವಣ್ಣ ದೇವಸ್ಥಾನ, ಹೆಗಡೆ ನಗರ, ಅಮೃತಹಳ್ಳಿ, ಜಕ್ಕೂರು, ವಿನಾಯಕ ಲೇಔಟ್, ಕೆಎಚ್ಬಿಯ ಕ್ವಾರ್ಟರ್ಸ್, ಕೆಎಚ್ಬಿ ಕ್ವಾರ್ಟರ್ಸ್, ಉ. ಗಾರ್ಡನ್, ಸಿದ್ಧಾರ್ಥ ನಗರ ಮತ್ತು ಸುತ್ತಮುತ್ತಲಿನ ಪ್ರದೇಶ, ಹೆಸರಘಟ್ಟ ಮುಖ್ಯರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ, ರವೀಂದ್ರ ನಗರ ಮತ್ತು ಸಂತೋಷ ನಗರ.

ಬೆಂಗಳೂರು ಪೂರ್ವ ವಲಯ

ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ದೊಮ್ಮಲೂರು, ಡಬಲ್ ರೋಡ್, ಗೌತಂಪುರ, ಹಲಸೂರು ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಡೇವಿಸ್ ರಸ್ತೆ, ಅಶೋಕ ರಸ್ತೆ, ಡಿಕೋಸ್ಟಾ ಲೇಔಟ್,

ವಿವೇಕಾನಂದ ನಗರ, ಜೈಭಾರತ ನಗರ, ಸಿಕೆ ಗಾರ್ಡನ್, ಜಯಂತಿ ನಗರ, ಮಧುರಾ ನಗರ, ಸೀಗೇಹಳ್ಳಿ, ಮೇಡಹಳ್ಳಿ ಮತ್ತು ಕುರುಡು ಸೊನ್ನೇನಹಳ್ಳಿ ಮುಖ್ಯ ರಸ್ತೆ

Edited By : Nirmala Aralikatti
Kshetra Samachara

Kshetra Samachara

08/12/2021 09:28 am

Cinque Terre

512

Cinque Terre

1

ಸಂಬಂಧಿತ ಸುದ್ದಿ