ಬೆಂಗಳೂರು ದಕ್ಷಿಣ: ಅವನ್ಯಾವನೋ ಪೊಲೀಸ್ ಇನ್ಸ್ ಪೆಕ್ಟರ್ ಅಂತೆ. ಇಂತ ಬಚ್ಚಾ ಇನ್ಸ್ಪೆಕ್ಟರ್‌ನ ಎಷ್ಟು ಜನ ನೋಡಿಲ್ಲ. ನನ್ನ ರಾಜಕೀಯ ವಯಸ್ಸು ಅವನಿಗೆ ಆಗಿಲ್ಲ.ನಾನಿನ್ನೂ ಮೂರನೇ ಕಣ್ಣು ಬಿಟ್ಟಿಲ್ಲ. ಅವ್ನಗೆ ಬಿಟ್ಟರೆ, ಬಳ್ಳಾರಿ, ರಾಯಚೂರು, ಗುಲ್ಬರ್ಗ ಎಲ್ಲೂ ಉಳಿಯೋದೇ ಇಲ್ಲ. ನನ್ನತ್ರ ರೌಡಿಸಂ ನಡೆಯಲ್ಲ. ನಾನು ಇದನ್ನೆಲ್ಲ ಆಡ್ಬಿಟ್ಟೆ ಎಂಎಲ್ಎ ಗಾಗಿ ಬಂದಿರೋದು. ಪೊಲೀಸ್ ಇನ್ಸ್ಪೆಕ್ಟರ್‌ನ ವಿರುದ್ಧ ಬಹಿರಂಗ ಸಭೆಯಲ್ಲಿ ಎಂ ಕೃಷ್ಣಪ್ಪ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಶಿಕಾರಿಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಊರುಗಳಿಗೆ ಹೋಗಲು ಬಸ್ ಇಲ್ಲದ ಸಮಯದಲ್ಲಿ ಬಿಎಂಟಿಸಿ ಬಸ್ ಅನ್ನ ಹಾಕಿಸಿ ತುಂಬಾ ಜನಕ್ಕೆ ಉಪಯೋಗ ಮಾಡಿಕೊಟ್ಟಿದ್ದೇನೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಟ್ಟು ಐದು ರೂಪಾಯಿ ಕೆಲಸ ಮಾಡಿಲ್ಲ. ಮನೆಯಲ್ಲಿ ಇರುವವರೆಲ್ಲ ಮಾತಾನಾಡಿದ್ದೇ ಬಂತು.
ಆದರೆ, ನಾನು ಬೀದಿಯಲ್ಲಿ ಇರೋನು ನಾನು. ನನಗೆ ಕಾಂಪೌಂಡ್ ಇಲ್ಲ. ತಕರಾರಿಲ್ಲ. ಮೂರನೇ ಕಣ್ಣು ಏನಾದ್ರೂ ಬಿಟ್ಟರೆ ಪ್ರತಿದಿನ ಕೋರ್ಟು-ಕಚೇರಿ ಅಂತ ಮೆಟ್ಟಲು ಹತ್ತಬೇಕು. ಅಷ್ಟು ಈಜಿ ಅನ್ಕೋಬೇಡಿ ನನ್ನನ್ನ. ತೊಡೆತಟ್ಟಿ ದವನಿಗೆ ತೊಡೆಮುರಿಯೋವರೆಗೂ ನಿದ್ದೆ ಬರೋದಿಲ್ಲ ಎಂದು ಖಾಸಗಿ ಕಾರ್ಯಕ್ರಮದಲ್ಲಿ ಎಂ ಕೃಷ್ಣಪ್ಪ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಗುಡುಗಿದರು.
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
06/06/2022 07:11 am