ಬೆಂಗಳೂರು : ಕಾಶ್ಮೀರ ಪಂಡಿತರ ಹತ್ಯೆ ಹಾಗೂ ವಲಸೆ ಘಟನೆಗಳನ್ನು ಆಧಾರಿಸಿ ನಿರ್ಮಾಣವಾಗಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ತಮ್ಮ ಕ್ಷೇತ್ರದ ಮುಖಂಡರೊಂದಿಗೆ ಬಾಣಸವಾಡಿಯ ಒರಿಯನ್ ಅವೆನ್ಯೂ ಮಾಲ್ ವೀಕ್ಷಿಸಿದರು.
ಬಳಿಕ ಮಾತನಾಡಿದ ಸಚಿವರು ಕೆಆರ್ ಪುರ ಕ್ಷೇತ್ರದ ರಾಮಮೂರ್ತಿ ನಗರ ಹಾಗೂ ವಿಜಿನಾಪುರ ವಾರ್ಡನ ಮುಖಂಡರೊಂದಿಗೆ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ವೀಕ್ಷಿಸಿದ್ದು, ಪ್ರತಿ ದಿನ ಕ್ಷೇತ್ರದ ಒಂದೊಂದು ವಾರ್ಡನ ಜನರೊಂದಿಗೆ ಚಿತ್ರ ವೀಕ್ಷಿಸಲಾಗುತ್ತಿದೆ ಎಂದರು.
ಜೊತೆಗೆ ಪ್ರತಿಯೊಬ್ಬರೂ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ನೋಡುವಂತೆ ಮನವಿ ಮಾಡಿದರು. ಕ್ಷೇತ್ರದ ಮುಖಂಡರಿಗಾಗಿ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು.
Kshetra Samachara
25/03/2022 08:41 pm