ದೊಡ್ಡಬಳ್ಳಾಪುರ : ಅಹಿಂದ ನಾಯಕ, ಹಿರಿಯ ರಾಜಕೀಯ ಮುಖಂಡರಾದ ಆರ್ ಎಲ್ ಜಾಲಪ್ಪ ವಯೋಸಹಜ ಕಾಯಿಲೆಯಿಂದ ಡಿಸೆಂಬರ್ 17 ರಂದು ನಿಧನರಾಗಿದ್ದು, ಅವರ ವೈಕುಂಠ ಸಮರಾಧನೆ ಕಾರ್ಯಕ್ರಮ ಡಿಸೆಂಬರ್ 29 ರಂದು ನೆರವೆರಲಿದೆ. ಅವರ ನೆನಪಿಗಾಗಿ ಮೆಮೋರಿಯಲ್ ಹಾಲ್ ನಿರ್ಮಿಸಲು ಕುಟುಂಬ ತಿರ್ಮಾನಿಸಿದೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜಾಲಪ್ಪ ಸಮುದಾಯದ ಮತಗಳು ಇದದ್ದು ಕೇವಲ 1500 ಮತಗಳು ಅಷ್ಟೇ, ಆದರೆ ಜಾಲಪ್ಪನವ ಸಾಮಾಜಿಕ ಬದ್ಧತೆಗೆ ತಾಲೂಕಿನ ಜನ ನಾಲ್ಕು ಬಾರಿ ಶಾಸಕರಿಗೆ ಆರಿಸಿಕಳುಸಿದ್ದಾರೆ, ಕ್ಷೇತ್ರದ ಜನರಿಗಾಗಿ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲಾಗಿದೆ, ಅವರ ನಿಧನದ ನಂತರ ಜಾಲಪ್ಪ ಕಾಲೇಜ್ ಅವರಣದಲ್ಲಿಯೇ ಅಂತಿಮ ಕಾರ್ಯಗಳನ್ನು ಮಾಡಲಾಗಿದ್ದು, ಅವರ ನೆನಪಿಗಾಗಿ ಜಾಲಪ್ಪನವರ ಮೆಮೋರಿಯಲ್ ಹಾಲ್ ನಿರ್ಮಿಸಲು ಕುಟುಂಬದವರು ತಿರ್ಮಾನಿಸಿದ್ದಾರೆ, ಅವರ ರಾಜಕೀಯ ಜೀವನದ ಆರಂಭದ ದಿನದಿಂದ ಜಾಲಪ್ಪನವರ ಪೋಟೋ ಗ್ಯಾಲರಿ ಮಾಡಲಾಗುವುದು.
ದೊಡ್ಡಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜ್ ಕಟ್ಟಬೇಕೆಂಬುದು ಜಾಲಪ್ಪನವರ ಕನಸಾಗಿತ್ತು, ಅವರ ಆಸೆಯಂತೆ ಈಗಾಗಲೇ 20 ಎಕರೆ ಜಾಗವನ್ನು ಮೆಡಿಕಲ್ ಕಾಲೇಜ್ ಗಾಗಿ ಇಡಲಾಗಿದೆ, ಮೆಡಿಕಲ್ ಕಾಲೇಜ್ ನಲ್ಲಿ ಅಲೋಪತಿ, ಆರ್ಯುವೇದ, ಯುನಾನಿ ಸೇರಿದಂತೆ ಎಲ್ಲಾ ರೀತಿಯ ವೈದಕೀಯ ಪದ್ಧತಿಗಳನ್ನು ಕಲಿಸುವ ಯೋಜನೆ ಇದೆ ಎಂದು ಜಾಲಪ್ಪನವರ ಕುಟುಂಬ ವರ್ಗ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
Kshetra Samachara
20/12/2021 09:19 pm