ಕೆ ಆರ್ ಪುರಂ: ಬೆಂಗಳೂರಿನ ಬೆಳ್ಳಂದೂರಿನಲ್ಲಿ ನೀರಿನ ಪ್ರಮಾಣ ತಗ್ಗಿದೆ. ಇಕೋ ಸ್ಪೇಸ್‌ನಲ್ಲಿ ಮಳೆ ನೀರಿನ ಪ್ರಮಾಣ ತಗ್ಗಿದೆ. ಎಂದಿನಂತೆ ವಾಹನ ಸವಾರರು ಸಂಚಾರಿಸುತ್ತಿದ್ದಾರೆ. ಆದರೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಭಯದಲ್ಲೇ ವಾಹನಸವಾರರು ಸಂಚಾರಿಸುತ್ತಿದ್ದಾರೆ.
ಸ್ವಲ್ಪ ಪ್ರಮಾಣದಲ್ಲಿ ರಸ್ತೆ ಮೇಲಿರುವ ಮಳೆ ನೀರು ಕಡಿಮೆಯಾಗಿದೆ. ಇಕೋ ಸ್ಪೇಪ್ ಸುತ್ತಮುತ್ತ ಮಳೆ ನೀರಿನಿಂದ ಭಾರೀ ಹಾನಿಯಾಗಿದ್ದು,ಅಂಗಡಿ, ಹೋಟೆಲ್, ಪುಟ್ ಪಾತ್ ಹಾಗೂ ಮನೆಗಳು ಮಳೆ ನೀರಿನಿಂದ ಡ್ಯಾಮೇಜ್ ಆಗಿದೆ. ಮಳೆಯಿಂದ ರಸ್ತೆಗಳು ಹಾಗೂ ಪುಟ್‌ಪಾಥ್ ಕಿತ್ತು ಹೋಗಿದೆ. ವಾಹನಸವಾರರು ಸಂಕಷ್ಟದಲ್ಲಿಯೇ ಕಷ್ಟಪಟ್ಟು ವಾಹನ ಚಾಲಿಸುತ್ತಿದ್ದಾರೆ.
ಮತ್ತೆ ಮಳೆ ಮುನ್ಸೂಚನೆ ಇರುವುದರಿಂದ ಇಕೋಸ್ಪೇಸ್ ಸುತ್ತಲಿನ ಜನರು ಭಯದಲ್ಲೇ ಬದುಕುತ್ತಿದ್ದಾರೆ. ಮಳೆಯಿಂದ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಓಡಾಡಲು ವಾಹನ ಸವಾರರಿಗೆ ಆತಂಕಪಾಡುತ್ತಿದ್ದಾರೆ. ಇನ್ನೂ ಒಂದ್ ಸೈಡ್ ನಿಂದ ರಸ್ತೆಗೆ ಕೆರೆಯ ನೀರು ಹರಿದುಬರುತ್ತಿದೆ. ಇಕೋಸ್ಪೇಸ್ ರಸ್ತೆಯ ಮೇಲೆ ಕೆರೆಯ ಮೀನು ಬಂದಿದೆ. ಮೀನು ಹಿಡಿಯಲು ಸ್ಥಳೀಯರು ಮುಗ್ಗಿಬಿದ್ದಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಮೀನುಗಳನ್ನ ಸ್ಥಳೀಯರು ಹಿಡಿದ್ದಾರೆ.
PublicNext
08/09/2022 02:22 pm